ಸ್ಫೋಟ ಸಂಭವಿಸಿದ ಸ್ಥಳದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
–ಪಿಟಿಐ ಚಿತ್ರ
ಚಂಡೀಗಢ: ಬಯಲು ಪ್ರದೇಶದಲ್ಲಿ ಇರಿಸಲಾಗಿದ್ದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸುವಾಗ ಸ್ಫೋಟ ಸಂಭವಿಸಿ ಶಂಕಿತ ಖಲಿಸ್ತಾನಿ ಉಗ್ರನೊಬ್ಬ ಮೃತಪಟ್ಟಿದ್ದಾನೆ. ಪಂಜಾಬ್‌ನ ಅಮೃತಸರದಲ್ಲಿ ಮಜಿತಾ ರಸ್ತೆಯಲ್ಲಿ ಮಂಗಳವಾರ ಘಟನೆ ನಡೆದಿದೆ.
‘ಸ್ಫೋಟದ ತೀವ್ರತೆಗೆ ಮೃತನ ಎರಡೂ ಕೈಗಳು ಚಿಂದಿಯಾಗಿವೆ. ಮೃತನಿಗೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಸೇರಿದಂತೆ ಕೆಲ ಭಯೋತ್ಪಾದಕರ ಸಂಘಟನೆಗಳ ಜೊತೆಗೆ ಸಂಪರ್ಕವಿರುವ ಶಂಕೆ ಇದೆ’ ಎಂದು ಡಿಐಜಿ (ಗಡಿ ವಲಯ) ಸತೀದರ್ ಸಿಂಗ್ ತಿಳಿಸಿದರು.
ವ್ಯಕ್ತಿ ಹಿಡಿದಿದ್ದ ಸ್ಫೋಟಕಗಳೇ ಸಿಡಿದಿವೆ. ಆತನ ಗುರುತು ಪತ್ತೆಯಾಗಿಲ್ಲ. ಸಾಂದರ್ಭಿಕ ಸಾಕ್ಷ್ಯಗಳ ಪ್ರಕಾರ ಆತ ಉಗ್ರ ಸಂಘಟನೆ ಒಂದರ ಸದಸ್ಯ ಎಂಬುದು ಸ್ಪಷ್ಟವಾಗಿದ್ದು, ಇದನ್ನು ದೃಢಪಡಿಸುವ ಸುಳಿವು ಆತನ ಪ್ಯಾಂಟ್‌ನ ಜೇಬಿನಲ್ಲಿ ಸಿಕ್ಕಿದೆ ಎಂದು ಹೇಳಿದರು.
ಸ್ಫೋಟದ ಪರಿಣಾಮ ಈ ವಲಯದಲ್ಲಿ ತೀವ್ರ ಆತಂಕ ನಿರ್ಮಾಣವಾಗಿತ್ತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.