ನವದೆಹಲಿ: ಮಹಾಭಾರತದ ‘ದ್ರೌಪದಿಯ ವಸ್ತ್ರಾಪಹರಣ’ ಪ್ರಸಂಗದ ಚಿತ್ರವನ್ನು ಹಂಚಿಕೊಂಡ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಅವರು, ಎಎಪಿ ಮತ್ತು ಅದರ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ‘ದುರಹಂಕಾರ’ವೇ ಪಕ್ಷದ ಸೋಲಿಗೆ ಕಾರಣ ಎಂದಿದ್ದಾರೆ.
‘ರಾವಣನ ದುರಹಂಕಾರವೂ ಹೆಚ್ಚು ದಿನ ಉಳಿಯಲಿಲ್ಲ’ ಎಂದು ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮಾಲಿವಾಲ್ ಅವರು ಕಳೆದ ವರ್ಷ ಎಎಪಿ ವಿರುದ್ಧ ಬಂಡಾಯ ಎದ್ದಿದ್ದರು.
ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಲಿವಾಲ್ ಕಳೆದ ವರ್ಷ ಆರೋಪಿಸಿದ್ದರು. ಆ ಘಟನೆಯನ್ನು ಉಲ್ಲೇಖಿಸಿ ಅವರು ದ್ರೌಪದಿಯ ವಸ್ತ್ರಾಪಹರಣ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೇಜ್ರಿವಾಲ್ ಅವರು ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ನಿವಾಸದಲ್ಲೇ ಹಲ್ಲೆ ಘಟನೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.