ತಿರುಮಲ ದೇಗುಲ
ತಿರುಪತಿ (ಆಂಧ್ರಪ್ರದೇಶ): ಬೆಂಗಳೂರಿನ ಭಕ್ತರು ತಿರುಮಲ ವೆಂಕಟೇಶ್ವರ ದೇಗುಲಕ್ಕೆ ₹1 ಕೋಟಿ ದೇಣಿಗೆ ಮತ್ತು ದೇವರಿಗೆ ವಜ್ರ ಹಾಗೂ ವೈಜಯಂತಿ ಕಲ್ಲುಗಳಿಂದ ಕೂಡಿದ ಚಿನ್ನದ ಲಕ್ಷ್ಮಿ ಪೆಂಡೆಂಟ್ ಅನ್ನು ನೀಡಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಯಾಣ್ ರಾಮನ್ ಕೃಷ್ಣಮೂರ್ತಿ ಅವರು ನೀಡಿರುವ ₹1ಕೋಟಿ ದೇಣಿಗೆಯನ್ನು ಭಕ್ತರಿಗೆ ಉಚಿತವಾಗಿ ನೀಡುವ ಅನ್ನ ಪ್ರಸಾದಕ್ಕೆ ಬಳಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೃಷ್ಣಮೂರ್ತಿ ಅವರು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ದೇಣಿಗೆಯ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆ.ಎಂ. ಶ್ರೀನಿವಾಸ ಮೂರ್ತಿ ಅವರು ₹25 ಲಕ್ಷ ಮೌಲ್ಯದ 148 ಗ್ರಾಂ ತೂಕದ ವಜ್ರ ಮತ್ತು ವೈಜಯಂತಿ ಕಲ್ಲುಗಳಿಂದ ಕೂಡಿದ ಚಿನ್ನದ ಲಕ್ಷ್ಮಿ ಪೆಂಡೆಂಟ್ ಅನ್ನು ಕಾಣಿಕೆ ನೀಡಿದ್ದಾರೆ ಎಂದೂ ಪ್ರಕಟಣೆಯಲ್ಲಿ ಹೇಳಿದೆ.
ತಿರುಮಲ ವೆಂಕಟೇಶ್ವರ ದೇಗುಲವನ್ನು ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವೆಂದು ಪರಿಗಣಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.