
ರಾಷ್ಟ್ರೀಯ, ರಾಜ್ಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.

ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣ ದರ ಸೋಮವಾರದಿಂದ (ಫೆ.9) ಶೇ 5ರಷ್ಟು ಹೆಚ್ಚಳ ಮಾಡುವ ಪ್ರಸ್ತಾವ ಸದ್ಯಕ್ಕೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು: ‘ಏನು ನಡೆದಿದೆ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಹೈಕಮಾಂಡ್ಗೆ ಮಾತ್ರ ಗೊತ್ತಿದೆ. ಹೈಕಮಾಂಡ್ ಸುಮ್ಮನೆ ಇದ್ದರೆ ನಾವು ಏನೆಂದು ಅರ್ಥ ಮಾಡಿಕೊಳ್ಳುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಬೀದರ್: ‘ಮುಖ್ಯಮಂತ್ರಿ ಯಾರೆಂಬುದು ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಸ್ವತಃ ಮುಖ್ಯಮಂತ್ರಿಯವರೇ ಈ ವಿಷಯ ಹೇಳಿದ್ದಾರೆ. ಅವರ ಕೆಲವು ಬೆಂಬಲಿಗರು ಹೇಳಿರಬಹುದು. ಆದರೆ, ಯಾರೋ ಏನೋ ಹೇಳಿಕೆ ಕೊಟ್ಟರೆ ಬದಲಾಗಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕ್ವಾಲಾಲಂಪುರ: ವ್ಯಾಪಾರ, ಹೂಡಿಕೆ, ರಕ್ಷಣೆ, ಇಂಧನ, ಉತ್ಪಾದನೆ ಮತ್ತು ಸೆಮಿಕಂಡಕ್ಟರ್‌ನಂತಹ ಆದ್ಯತಾ ವಲಯಗಳಲ್ಲಿನ ಸಂಬಂಧ ವಿಸ್ತರಿಸಲು ಭಾರತ ಮತ್ತು ಮಲೇಷ್ಯಾ ಭಾನುವಾರ ಒಪ್ಪಿಗೆ ಸೂಚಿಸಿವೆ.
ಭೋಪಾಲ್: ‘ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ರಚನಾತ್ಮಕ ಮಾತುಕತೆಯಿಂದ ನಡೆದಿದೆಯೋ ಹೊರತು ಚೌಕಾಶಿಯಿಂದ ಅಲ್ಲ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ನವದೆಹಲಿ: ಮುಸ್ಲಿಮರ ವಿರುದ್ಧದ ದ್ವೇಷ ಬಿಂಬಿಸುವ ವಿಡಿಯೊ ಅನ್ನು ಅಸ್ಸಾಂ ಬಿಜೆಪಿ ಘಟಕ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಿರೋಧ ಪಕ್ಷಗಳ ನಾಯಕರ ಟೀಕೆ ಬಳಿಕ, ’ಎಕ್ಸ್‘ನಿಂದ ವಿಡಿಯೊ ಅನ್ನು ಬಿಜೆಪಿ ತೆಗೆದು ಹಾಕಿತು.
ಟೋಕಿಯೊ: ಭಾನುವಾರ ನಡೆದ ಸಂಸತ್ ಚುನಾವಣೆಯಲ್ಲಿ ಜಪಾನ್ ಪ್ರಧಾನಿ ಸನೇ ತಕೈಚಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟವು ಬಹುಮತ ಪಡೆಯುವುದು ನಿಚ್ಚಳವಾಗಿದೆ ಎಂದು ಎನ್‌ಎಚ್‌ಕೆ ಪಬ್ಲಿಕ್ ಟೆಲಿವಿಷನ್ ಸೇರಿದಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳು ಅಂದಾಜಿಸಿವೆ.
ಮುಂಬೈ: ‘ದೇಶದ ಎಲ್ಲ ಭಾಗೀದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ರೂಪಿಸಬೇಕು. ಹಾಗೆಯೇ, ಯುಸಿಸಿ ಜನರಲ್ಲಿ ಒಡಕು ಮೂಡಿಸುವಂತಿರಬಾರದು’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಪ್ರತಿಪಾದಿಸಿದರು.
ನವದೆಹಲಿ: ಭಾರತದ ತೈಲ ಸಂಸ್ಕರಣಾ ಘಟಕಗಳು ರಷ್ಯಾದಿಂದ ತೈಲ ಖರೀದಿಯನ್ನು ತಪ್ಪಿಸುತ್ತಿದ್ದು, ದೀರ್ಘ ಕಾಲ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿದ್ದಾರೆ ಎಂದು ಸಂಸ್ಕರಣೆ ಮತ್ತು ವ್ಯಾಪಾರ ಮೂಲಗಳು ಹೇಳಿವೆ. ಇದು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಾಯ ಮಾಡಲಿದೆ ಎಂದು ನಂಬಲಾಗಿದೆ.
ಮುಂಬೈ: ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡ ಭಾನುವಾರ ಅನನುಭವಿ ನೇಪಾಳ ಕೈಲಿ ಸ್ವಲ್ಪದರಲ್ಲೇ ಮುಖಭಂಗದಿಂದ ಪಾರಾಯಿತು. ರೋಚಕವಾಗಿದ್ದ ಟಿ20 ವಿಶ್ವಕಪ್ ಸಿ ಗುಂಪಿನ ಹಣಾಹಣಿಯಲ್ಲಿ ನೇಪಾಳ ತಂಡ ಕೊನೆಯ ಓವರಿನವರೆಗೆ ಹೋರಾಟ ತೋರಿದರೂ, ಇಂಗ್ಲೆಂಡ್ ನಾಲ್ಕು ರನ್‌ಗಳ ಗೆಲುವು ಪಡೆದು ನಿಟ್ಟುಸಿರುಬಿಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.