ADVERTISEMENT

2026 ಜನವರಿ 15: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 3:09 IST
Last Updated 15 ಜನವರಿ 2026, 3:09 IST
   

ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಹರಿದ್ವಾರದ ಗಂಗಾ ಘಾಟ್‌ಗೆ ಎಲ್ಲ ಹಿಂದೂಯೇತರರ ಪ್ರವೇಶ ನಿಷೇಧಕ್ಕೆ ಗಂಗಾ ಸಭಾ ಒತ್ತಾಯ

ಹರಿದ್ವಾರದ ಕುಂಭ ಪ್ರದೇಶದ ವ್ಯಾಪ್ತಿಯ ಎಲ್ಲ ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಬೇಕೆಂಬ ಬೇಡಿಕೆಗಳ ನಡುವೆ, ಗಂಗಾ ಸಭಾ ಬುಧವಾರ ಈ ನಿರ್ಬಂಧವು ಸರ್ಕಾರಿ ಇಲಾಖೆಗಳು, ಸಂಸ್ಥೆಗಳು ಮತ್ತು ಮಾಧ್ಯಮ ಸಿಬ್ಬಂದಿಗೂ ಅನ್ವಯಿಸಬೇಕು ಎಂದು ಹೇಳಿದೆ.

ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ಹೃದಯಘಾತದಿಂದ ಸಾವು

ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ (49) ಅವರು ಗುರುವಾರ ಬೆಳಗಿನ ಜಾವ ಹೃದಯಘಾತದಿಂದಾಗಿ ನಿಧನರಾಗಿದ್ದಾರೆ.

ADVERTISEMENT

Iran–US Conflict: ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಚರ್ಚೆ

ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸರ್ವಾಧಿಕಾರಿ ಆಡಳಿತ ಹಾಗೂ ಹದಗೆಟ್ಟ ಆರ್ಥಿಕತೆ ವಿರುದ್ಧ ದಂಗೆ ಎದ್ದ ಪ್ರತಿಭಟನಕಾರರ ವಿರುದ್ಧ ಅಲ್ಲಿನ ಸರ್ಕಾರ ದಮನಕಾರಿ ನೀತಿ ಅನುಸರಿಸಿದೆ. ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಜನರನ್ನು ಹತ್ಯೆ ಮಾಡಿದೆ. ಈ ನಡುವೆ ಅಲ್ಲಿ ನೆಲೆಸಿರುವ ಭಾರತೀಯರಿಗೆ ದೇಶ ತೊರೆಯುವಂತೆ ಸೂಚನೆ ನೀಡಲಾಗಿದೆ.

ಎಸ್ಕಾಂಗಳಿಗೆ ₹4,900 ಕೋಟಿ ಆದಾಯ ಖೋತಾ: ಏಪ್ರಿಲ್‌ಗೆ ಮತ್ತೆ ವಿದ್ಯುತ್‌ ದರ ಏರಿಕೆ

ಐದು ವಿದ್ಯುತ್‌ ಸರಬರಾಜು ಕಂಪನಿಗಳ ಆದಾಯದಲ್ಲಿ ಖೋತಾ ಆಗಿದ್ದು, ಇದನ್ನು ಸರಿ ದೂಗಿಸಲು ಏಪ್ರಿಲ್‌ನಿಂದಲೇ ವಿದ್ಯುತ್‌ ದರ ಏರಿಸುವ ತಯಾರಿ ನಡೆದಿದೆ.

ಬೀದರ್‌: ಕತ್ತು ಸೀಳಿದ ಮಾಂಜಾ, ವ್ಯಕ್ತಿ ಸಾವು

ಗಾಳಿಪಟದ ಮಾಂಜಾ (ದಾರ) ಬೈಕ್‌ ಮೇಲೆ ತೆರಳುವಾಗ ಕುತ್ತಿಗೆಗೆ ಸಿಕ್ಕಿಕೊಂಡು ಸೀಳಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೀದರ್‌ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಸೇತುವೆ ಬಳಿಯಲ್ಲಿ ಬುಧವಾರ ನಡೆದಿದೆ.

Bengaluru Metro | ನಮ್ಮ ಮೆಟ್ರೊ ಮೂರನೇ ಹಂತ: ಮೊದಲ ಟೆಂಡರ್‌ ಆಹ್ವಾನ

ಜೆ.ಪಿ.ನಗರ 4ನೇ ಹಂತ– ಕೆಂ‍ಪಾಪುರ ಹಾಗೂ ಹೊಸಹಳ್ಳಿ–ಕಡಬಗೆರೆ ಕಾರಿಡಾರ್‌ಗಳನ್ನು ಹೊಂದಿರುವ ನಮ್ಮ ಮೆಟ್ರೊ ಮೂರನೇ ಹಂತದ ಕಾಮಗಾರಿಗಳಿಗೆ ಮಂಗಳವಾರ ಮೊದಲ ಟೆಂಡರ್‌ ಆಹ್ವಾನಿಸಲಾಗಿದೆ.

IND vs NZ | ಮಿಚೆಲ್ ಅಬ್ಬರದ ಮುಂದೆ ಮಂಕಾದ ರಾಹುಲ್ ಶತಕ: ಭಾರತಕ್ಕೆ ಸೋಲು

ರಾಜ್‌ಕೋಟ್: ಬುಧವಾರ ಇಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಕಿವೀಸ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರಿಬ್ಬರೂ ಸೊಗಸಾದ ಶತಕಗಳನ್ನು ಗಳಿಸಿದರು. ಇಬ್ಬರೂ ತಮ್ಮ ತಂಡಗಳು ಕುಸಿಯುವ ಆತಂಕದಲ್ಲಿದ್ದಾಗ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಆದರೆ ಜಯ ಮಿಚೆಲ್ ಅವರ ಶತಕಕ್ಕೆ ಒಲಿಯಿತು.

ತಂತ್ರಾಂಶದಲ್ಲಿ ಕಾಣದ ಹೊಗೆ ತಪಾಸಣೆ: ಸಂಕಷ್ಟಕ್ಕೆ ಸಿಲುಕುತ್ತಿರುವ ವಾಹನ ಮಾಲೀಕರು

ಬೆಂಗಳೂರು: ವಾಹನಗಳ ಹೊಗೆ ತಪಾಸಣೆ ನಡೆಸಿ ಪ್ರಮಾಣಪತ್ರ ಪಡೆದಿದ್ದರೂ ‘ವಾಹನ್‌–4’ ತಂತ್ರಾಂಶದಲ್ಲಿ ಕಾಣಿಸುತ್ತಿಲ್ಲ. ಹಾಗಾಗಿ ಹೊರ ರಾಜ್ಯಗಳಿಗೆ ತೆರಳುವ ವಾಹನಗಳ ಮಾಲೀಕರು ದಂಡ ಕಟ್ಟಬೇಕಾದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೊಸ ತಂತ್ರಾಂಶ ಸಿದ್ಧವಾಗಿದ್ದರೂ ಅದರ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ. 

ಬ್ರೋಕರೇಜ್‌ ಮಾತು: ಕೆನರಾ ಎಚ್‌ಎಸ್‌ಬಿಸಿ ಲೈಫ್ ಇನ್ಶೂರೆನ್ಸ್‌ ಷೇರು ಬೆಲೆ ₹180ಕ್ಕೆ

ಕೆನರಾ ಎಚ್‌ಎಸ್‌ಬಿಸಿ ಲೈಫ್ ಇನ್ಶೂರೆನ್ಸ್‌ ಕಂಪನಿಯ ಷೇರಿನ ಬೆಲೆ ₹180 ಆಗಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

ಇಂದಿನಿಂದ ಜೈಪುರ ಸಾಹಿತ್ಯ ಉತ್ಸವ: 25 ದೇಶಗಳ ಚಿಂತಕರು, ಲೇಖಕರು, ತಜ್ಞರ ಸಮ್ಮಿಲನ

ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವದ (ಜೆಎಲ್‌ಎಫೋ್‌) 19ನೇ ಆವೃತ್ತಿ ಗುರುವಾರ (ಜ.15) ಆರಂಭವಾಗಲಿದೆ. ‘ಪಿಂಕ್ ಸಿಟಿʼಯ ಕ್ಲಾರ್ಕ್ಸ್ ಆಮೆರ್ ಹೋಟೆಲ್‌ನಲ್ಲಿ 19ರವರೆಗೂ ದೇಶ ಹಾಗೂ ಜಾಗತಿಕ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.