ADVERTISEMENT

06 ಫೆಬ್ರುವರಿ 2026: ಈ ದಿನದ 10 ಪ್ರಮುಖ ಸುದ್ದಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2026, 4:54 IST
Last Updated 6 ಫೆಬ್ರುವರಿ 2026, 4:54 IST
<div class="paragraphs"><p>ಈ ದಿನದ ಪ್ರಮುಖ 10 ಸುದ್ದಿಗಳು</p></div>

ಈ ದಿನದ ಪ್ರಮುಖ 10 ಸುದ್ದಿಗಳು

   

ರಾಷ್ಟ್ರೀಯ, ರಾಜ್ಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.

​ನೆಲಮಂಗಲ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್;40 ಮಂದಿ ಪಾರು

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ  ಅಪಘಾತವೊಂದು ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ನೆಲಮಂಗಲ ಸಮೀಪದ ಹನುಮಂತಪುರ ಗೇಟ್ ಬಳಿ ಶುಕ್ರವಾರ ನಸುಕಿನ ವೇಳೆ ಈ ಘಟನೆ ನಡೆದಿದೆ.

ADVERTISEMENT

10 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳಿಗೆ ಟೆಂಡರ್‌ ಇಲ್ಲದೆ ಟಿ.ವಿ ಖರೀದಿ

ಬೆಂಗಳೂರು: ಟೆಂಡರ್‌ ಕರೆಯದೆ ನಿಯಮಗಳಲ್ಲಿನ ನ್ಯೂನತೆಯನ್ನೇ ಬಳಸಿಕೊಂಡು ಕೊಟೇಶನ್ ಆಧಾರದಲ್ಲೇ ರಾಜ್ಯದ 10 ಸಾವಿರಕ್ಕೂ ಹೆಚ್ಚು ಅಂಗನ ವಾಡಿಗಳಿಗೆ ಒಂದೇ ಸಂಸ್ಥೆಯ ಮೂಲಕ ಟಿ.ವಿಗಳನ್ನು ಸರಬರಾಜು ಮಾಡಲಾಗಿದೆ.

WPL: 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ RCB; 4ನೇ ಸಲವೂ ಮುಗ್ಗರಿಸಿದ ಡೆಲ್ಲಿ

ವಡೋದರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ಬಳಗವು ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ ನಾಲ್ಕನೇ ಬಾರಿಯೂ ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಅನುಭವಿಸಿತು.

ಮೆಟ್ರೊ ಪ್ರಯಾಣ ದರ ಪರಿಷ್ಕರಣೆ ಪಟ್ಟಿ ಪ್ರಕಟ: ಸೋಮವಾರದಿಂದ ಜಾರಿ

ಬೆಂಗಳೂರು: ಮೆಟ್ರೊ ಪ್ರಯಾಣದರ ಪರಿಷ್ಕರಣೆ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಬುಧವಾರವರೆಗೂ ಹೇಳಿಕೊಂಡು ಬಂದಿದ್ದ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಗುರುವಾರ ದರ ಪರಿಷ್ಕರಣೆಯ ಪಟ್ಟಿ ಪ್ರಕಟಿಸಿದ್ದಾರೆ.

ಪ್ರಧಾನಿ ಉತ್ತರವಿಲ್ಲದೇ ಲೋಕಸಭೆಯಲ್ಲಿ ವಂದನಾ ನಿರ್ಣಯ ಅಂಗೀಕಾರ

ನವದೆಹಲಿ: ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರ ನೀಡದೆಯೇ ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. 

ಚಾಲಕನೇ ಮಾಲೀಕ । ಮೂರು ವರ್ಷಗಳಲ್ಲಿ ದೇಶದೆಲ್ಲೆಡೆ ಸೇವೆ ಆರಂಭ: ಅಮಿತ್ ಶಾ

ನವದೆಹಲಿ: ‘ಭಾರತ್‌ ಟ್ಯಾಕ್ಸಿ’ ಸೇವೆಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಗುರುವಾರ ಚಾಲನೆ ನೀಡಿದ್ದಾರೆ. ಇದು ದೇಶದಲ್ಲಿ ಸಹಕಾರ ತತ್ತ್ವದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಮೊದಲ ವೇದಿಕೆ ಆಗಿದೆ.

300 ಪತ್ರಕರ್ತರನ್ನು ವಜಾಗೊಳಿಸಿದ ವಾಷಿಂಗ್ಟನ್‌ ಪೋಸ್ಟ್

ವಾಷಿಂಗ್ಟನ್‌: ಅಮೆರಿಕದ ಪ್ರಮುಖ ದೈನಿಕ ಬುಧವಾರ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 300ಕ್ಕೂ ಅಧಿಕ ಪತ್ರಕರ್ತರನ್ನು ವಜಾಗೊಳಿಸಿದೆ. ತಿರುವನಂತಪುರ ಸಂಸದ ಶಶಿ ತರೂರ್‌ ಅವರ ಮಗ, ಪತ್ರಕರ್ತ ಇಶಾನ್‌ ತರೂರ್‌ ಸೇರಿದಂತೆ ಕ್ರೀಡೆ, ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವರದಿ ಮಾಡುತ್ತಿದ್ದ ಪತ್ರಕರ್ತರು ಕೂಡ ಇದರಲ್ಲಿದ್ದಾರೆ.

ಕಾರವಾರ: ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಅವಘಡ

ಕಾರವಾರ: ಇಲ್ಲಿನ ಶಿರವಾಡದಲ್ಲಿರುವ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶುಕ್ರವಾರ ನಸುಕಿನ ಜಾವ ಬೆಂಕಿ ಅವಘಡ ಸಂಭವಿಸಿದೆ. ಪ್ಲಾಸ್ಟಿಕ್ ಸೇರಿದಂತೆ ಘನ ತ್ಯಾಜ್ಯಗಳನ್ನು ವಿಲೇವಾರಿಗೆ ದಾಸ್ತಾನು ಮಾಡಿದ್ದ ಪ್ರದೇಶಕ್ಕೆ ಬೆಂಕಿ ಆವರಿಸಿದೆ. ನಸುಕಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿ ತಿಳಿಸಿದ್ದಾರೆ.

‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ

ಬೆಂಗಳೂರು: ದುನಿಯಾ ವಿಜಯ್ ಮತ್ತು ರಚಿತಾ ರಾಮ್‌ ನಟನೆಯ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ‘ಎಲ್ಲ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ಫೆ. 5ರಿಂದ ಆರು ತಿಂಗಳವರೆಗೆ ಟಿಕೆಟ್‌ ಮೇಲೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ವಿಧಿಸಬಾರದು’ ಎಂದು ಆದೇಶದಲ್ಲಿ ಆರ್ಥಿಕ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.