ತಿರುಮಲ ದೇವಸ್ಥಾನ
ಹೈದರಾಬಾದ್: ಭಕ್ತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಪವಿತ್ರ ಗೋವಿಂದ ನಾಮಾವಳಿಯನ್ನು ರೀಮಿಕ್ಸ್ ಮಾಡಿದ್ದಕ್ಕಾಗಿ 'ಡಿಡಿ ನೆಕ್ಸ್ಟ್ ಲೆವೆಲ್' ತಮಿಳು ಚಲನಚಿತ್ರದ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಟಿಟಿಡಿ ಮಂಡಳಿ ನಿರ್ಧರಿಸಿದೆ.
ತಿರುಪತಿಯ ಜನಸೇನಾ ಪಕ್ಷದ ಕಾರ್ಯಕರ್ತರು 'ಶ್ರೀನಿವಾಸ ಗೋವಿಂದ' ಹಾಡಿನ ಬಗ್ಗೆ ದೂರು ದಾಖಲಿಸಿದ್ದು, ಈ ಹಾಡಿನಲ್ಲಿ ವೆಂಕಟೇಶ್ವರ ದೇವರಿಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಚಿತ್ರವನ್ನು ನಿಷೇಧಿಸಬೇಕೆಂದು ಜನ ಸೇನಾ ಪಕ್ಷವು ಕರೆ ನೀಡಿದ್ದು , ಇದು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಪ್ರತಿಪಾದಿಸಿದೆ.
ಈ ಬೇಡಿಕೆಗಳು ಈಡೇರುವವರೆಗೆ, ತಮಿಳುನಾಡಿನ ಪ್ರತಿನಿಧಿಗಳಿಗೆ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ನಾವು ಒತ್ತಾಯಿಸುತ್ತೇವೆ ಎಂದು ಜನಸೇನಾ ನಾಯಕ ಕಿರಣ್ ರಾಯಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.