ADVERTISEMENT

ನ.8ರಂದು ಬೆಂಗಳೂರು-ಎರ್ನಾಕುಲಂ ಸೇರಿದಂತೆ 4 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ

ಪಿಟಿಐ
Published 6 ನವೆಂಬರ್ 2025, 11:20 IST
Last Updated 6 ನವೆಂಬರ್ 2025, 11:20 IST
<div class="paragraphs"><p>ವಂದೇ ಭಾರತ್ ಎಕ್ಸ್‌ಪ್ರೆಸ್</p></div>

ವಂದೇ ಭಾರತ್ ಎಕ್ಸ್‌ಪ್ರೆಸ್

   

ನವದೆಹಲಿ: ನವೆಂಬರ್ 8ರಂದು ಎರ್ನಾಕುಲಂ-ಬೆಂಗಳೂರು ಸೇರಿದಂತೆ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ನವೆಂಬರ್ 8ರಂದು ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈ ವೇಳೆ ನಾಲ್ಕು ಹೊಸ ವಂದೇ ಭಾರತ್ ರೈಲುಗಳ ಸಂಚಾರವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

ADVERTISEMENT

ನಾಲ್ಕು ಹೊಸ ವಂದೇ ಭಾರತ್ ರೈಲುಗಳ ವಿವರ:

  • ಬನಾರಸ್-ಖಜುರಾಹೊ,

  • ಲಖನೌ-ಸಹಾರನ್‌ಪುರ,

  • ಫಿರೋಜ್‌ಪುರ-ದೆಹಲಿ,

  • ಎರ್ನಾಕುಲಂ-ಬೆಂಗಳೂರು

ಎರ್ನಾಕುಲಂ-ಬೆಂಗಳೂರು ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲಿನ ಆಗಮನದೊಂದಿಗೆ ಪ್ರಯಾಣದ ಅವಧಿ ಎರಡು ತಾಸುಗಳಷ್ಟು ಕಡಿಮೆಯಾಗಲಿದೆ. ಎರಡು ಗಮ್ಯಸ್ಥಾನಗಳ ನಡುವಣ ದೂರವನ್ನು 8 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಲಿದೆ.

ಇದರಿಂದ ಐಟಿ, ವಾಣಿಜ್ಯ, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಹೆಚ್ಚಿನ ನೆರವನ್ನುಂಟು ಮಾಡಲಿದೆ.

ಈ ಮಾರ್ಗವು ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಆರ್ಥಿಕ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.