ADVERTISEMENT

ನಿರ್ಭಯಾ ನಿಧಿಯಡಿ ಖರೀದಿಸಿದ್ದ ವಾಹನಗಳು ಸಂಸದರ ಭದ್ರತೆಗೆ ಬಳಕೆ: ವಿಪಕ್ಷಗಳು ಕಿಡಿ

ಶಿಂಧೆ ಸರ್ಕಾರದ ವಿರುದ್ಧ ಕಾಂಗ್ರೆಸ್‌, ಶಿವಸೇನಾ, ಎನ್‌ಸಿಪಿ ಕಿಡಿ

ಪಿಟಿಐ
Published 11 ಡಿಸೆಂಬರ್ 2022, 14:35 IST
Last Updated 11 ಡಿಸೆಂಬರ್ 2022, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಪೊಲೀಸರು ‘ನಿರ್ಭಯಾ ನಿಧಿ’ ಬಳಸಿ ಖರೀದಿಸಿದ್ದ ವಾಹನಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಶಾಸಕರು ಮತ್ತು ಸಂಸದರ ವೈ ಪ್ಲಸ್‌ ಭದ್ರತೆಗೆ ಬಳಕೆ ಮಾಡಲಾಗುತ್ತಿದೆ ಎಂದು ಭಾನುವಾರ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮಹಿಳೆಯರ ವಿರುದ್ಧದ ಅಪರಾಧಗಳ ತಡೆ ಉದ್ದೇಶದಿಂದ ನಿರ್ಭಯಾ ನಿಧಿಯಡಿಯಲ್ಲಿ ಕಳೆದ ವರ್ಷ ಜೂನ್‌ನಲ್ಲಿ 255 ಕಾರುಗಳು, 513 ಬೈಕ್‌ಗಳನ್ನು ಖರೀದಿಸಲಾಗಿತ್ತು.ಈ ಪೈಕಿ 47 ಬೊಲೆರೊ ವಾಹನಗಳನ್ನು ಶಾಸಕರು ಮತ್ತು ಸಂಸದರ ಭದ್ರತೆಗೆ ಬಳಕೆ ಮಾಡಿಕೊಳ್ಳಲಾಗಿತ್ತು. ಬಳಿಕ 17 ವಾಹನಗಳನ್ನು ವಾಪಸ್‌ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಮಹಿಳೆಯರ ಸುರಕ್ಷತೆಗಿಂತ ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳಿಗೆ ಭದ್ರತೆ ನೀಡುವುದೇ ಹೆಚ್ಚು ಮುಖ್ಯವೇ ಎಂದು ಪ್ರಶ್ನಿಸಿವೆ. ಕೂಡಲೇ ಎಲ್ಲ ವಾಹನಗಳನ್ನು ವಾಪಸ್‌ ನೀಡಬೇಕು ಎಂದು ಆಗ್ರಹಿಸಿವೆ.

ADVERTISEMENT

ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ 2013ರಿಂದ ರಾಜ್ಯ ಸರ್ಕಾರಗಳಿಗೆ ಅನುದಾನ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.