ADVERTISEMENT

ವಕ್ಫ್‌ ಕಾಯ್ದೆ ವಿಚಾರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ: ಸಿಎಂ ಯೋಗಿ ಕಿಡಿ

ಪಿಟಿಐ
Published 13 ಏಪ್ರಿಲ್ 2025, 11:37 IST
Last Updated 13 ಏಪ್ರಿಲ್ 2025, 11:37 IST
<div class="paragraphs"><p>ಸಿಎಂ ಯೋಗಿ ಆದಿತ್ಯನಾಥ</p></div>

ಸಿಎಂ ಯೋಗಿ ಆದಿತ್ಯನಾಥ

   

ಲಖನೌ: ವಕ್ಫ್‌ ಕಾಯ್ದೆ ಜಾರಿಗೆ ಬಂದ ಬಳಿಕ ‘ಹಿಂಸಾಚಾರಕ್ಕೆ ಪ್ರಚೋದಿಸಲಾಗುತ್ತಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ವಕ್ಪ್‌ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ‘ಮೂವರ ಹಿಂದೂಗಳನ್ನು ಮನೆಯಿಂದ ಹೊರಗೆಳೆದು ತಂದು ಹತ್ಯೆ ಮಾಡಲಾಗಿದೆ. ಯಾರು ಅವರೆಲ್ಲಾ? ವಕ್ಫ್‌ ಹೆಸರಿನಲ್ಲಿನ ಭೂಮಿಯಿಂದ ಯಾರು ಹೆಚ್ಚಿನ ಲಾಭ ಪಡೆಯಬೇಕಾಗಿತ್ತೋ ಅದೇ ಬಡ ಮತ್ತು ವಂಚಿತ ದಲಿತ ಸಮುದಾಯದವರು.

ADVERTISEMENT

ಒಂದೇ ದೇಶದಲ್ಲಿ ವಕ್ಫ್‌ ಹೆಸರಿನಲ್ಲಿ ಲಕ್ಷಗಟ್ಟಲೆ ಎಕರೆ ಜಮೀನನ್ನು ಆಕ್ರಮಿಸಿಕೊಂಡಿರುವುದು ಅಚ್ಚರಿ ತಂದಿದೆ. ವಕ್ಫ್‌ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದು ಕ್ರಮ ತೆಗೆದುಕೊಳ್ಳುವವರೆಗೂ ಆಕ್ರಮಿಸಿಕೊಂಡವರ ಬಳಿ ಯಾವುದೇ ದಾಖಲೆ ಪತ್ರ, ಆದಾಯ ಪತ್ರಗಳಿರಲಿಲ್ಲ. ಹೀಗಿದ್ದಾಗ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಯೋಗಿ ಕಿಡಿಕಾರಿದ್ದಾರೆ.

ಪ್ರತಿಯೊಬ್ಬ ಹಿಂದೂವನ್ನೂ ರಕ್ಷಿಸಲು ಬಿಜೆಪಿ ಬದ್ಧವಾಗಿದೆ, ಅದಕ್ಕಾಗಿಯೇ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತಂದಿರುವುದು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.