ಬೆಂಗಳೂರು: ಸಾಮಾಜಿಕ ತಾಣಗಳಿಂದ ದೂರು ಉಳಿದಿರುವ ಚಿತ್ರ ನಟಿ, ಮಾಜಿ ಸಂಸದೆ ರಮ್ಯಾ ಅವರು ಇಂದು ದಿಢೀರ್ ಫೇಸ್‌ಬುಕ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆನೆ ಹಂತಕರ ವಿರುದ್ಧದ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಕೇರಳದಲ್ಲಿ ಸಂಭವಿಸಿದ ಗರ್ಭಿಣಿ ಆನೆಯ ದುರಂತದ ವಿಚಾರವಾಗಿ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಆನೆ ಹಂತಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಸಂಬಂಧ ಚೇಂಜ್ ಒಆರ್‌ಜಿ ಆರಂಭಿಸಿರುವ ಅಭಿಯಾನಕ್ಕೆ ಅವರು ಸಹಿ ಹಾಕಿದ್ದು, ಇತರರನ್ನೂ ಸಹಿ ಹಾಕುವಂತೆ ಅವರು ಫೇಸ್‌ಬುಕ್ ಮೂಲಕ ಕರೆ ನೀಡಿದ್ದಾರೆ. ಅದರ ಲಿಂಕ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನೀವೆಲ್ಲರೂ ಸುರಕ್ಷಿತರಾಗಿದ್ದೀರಿ ಎಂದು ಭಾವಿಸುತ್ತೇನೆ. ಈ ಅರ್ಜಿಗೆ ಒಂದು ಕ್ಷಣ ಸಹಿ ಹಾಕಿ’ ಎಂದು ಒಕ್ಕಣೆ ಬರೆದು ಅವರು ಲಿಂಕ್ ಹಂಚಿಕೊಂಡಿದ್ದಾರೆ.
ರಾಜಕೀಯ ಮೇಲಾಟದಿಂದ ಬೆಸರಗೊಂಡು ತಮ್ಮ ಟ್ವೀಟರ್ ಖಾತೆಯೂ ಸೇರಿದ್ದಂತೆ ಎಲ್ಲಾ ಸಾಮಾಜಿಕ ಜಾಲತಾಣದ ಖಾತೆಯನ್ನು ಡಿ-ಆಕ್ಟಿವೇಟ್ ಮಾಡಿ, ಅಜ್ಞಾತಕ್ಕೆ ತೆರಳಿದ್ದರು. ಇತ್ತೀಚಿಗೆ ಟ್ವೀಟರ್ ಖಾತೆಗೆ ಮರಳಿದ್ದ ರಮ್ಯಾ ಈಗ ಫೇಸ್ ಬುಕ್ ನಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ಕಳೆದ ವರ್ಷ 2019 ಮೇನಲ್ಲಿ ಫೇಸ್‌ಬುಕ್‌ನಲ್ಲಿ ಅಪ್‌ಡೇಟ್ ಮಾಡಿದ್ದ ನಂತರ ಮತ್ತೆ ಕಾಣಿಸಿಕೊಂಡಿರಲಿಲ್ಲ. ಆದರೀಗ ಗರ್ಭಿಣಿ ಆನೆಯ ಹತ್ಯೆ ಖಂಡಿಸಿ ಪೋಸ್ಟ್ ಮಾಡಿದ್ದಾರೆ.
ರಮ್ಯಾ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅವರ ಪೋಸ್ಟ್‌ಗೆ ಸ್ಪಂದಿಸಿ ಸಾವಿರಾರು ಮೆಚ್ಚುಗೆ ವ್ಯಕ್ತವಾಗುತ್ತಿವೆ. ಇದೊಂದು ದುರಂತ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಕಮೆಂಟ್ ಹಾಕಿದ್ದಾರೆ.
ಇನ್ನಷ್ಟು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.