ADVERTISEMENT

ಬಾಗಲಕೋಟೆ, ದಾವಣಗೆರೆ ದಕ್ಷಿಣ: ಉಪಚುನಾವಣೆಗೆ ಪ್ರಕ್ರಿಯೆ ಆರಂಭಿಸಿದ ಆಯೋಗ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 1:48 IST
Last Updated 4 ಜನವರಿ 2026, 1:48 IST
<div class="paragraphs"><p> ಶಾಮನೂರು ಶಿವಶಂಕರಪ್ಪ,&nbsp;ಎಚ್‌.ವೈ.ಮೇಟಿ</p></div>

ಶಾಮನೂರು ಶಿವಶಂಕರಪ್ಪ, ಎಚ್‌.ವೈ.ಮೇಟಿ

   

ಬೆಂಗಳೂರು: ಕಾಂಗ್ರೆಸ್‌ನ ಎಚ್‌.ವೈ.ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಚುನಾವಣಾ ಆಯೋಗವು ತಯಾರಿ ಆರಂಭಿಸಿದೆ.

ಇದರ ಭಾಗವಾಗಿ ಎರಡೂ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಆದೇಶ ಹೊರಡಿಸಿದ್ದು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯಲಿದೆ ಎಂದು ತಿಳಿಸಿದೆ.

ADVERTISEMENT

ಎರಡೂ ಕ್ಷೇತ್ರಗಳಿಗೆ ಸಂಬಂಧಪಟ್ಟ ಮತದಾರರ ಪಟ್ಟಿಗಳ ಕರಡನ್ನು ಶನಿವಾರ ಬಿಡುಗಡೆ ಮಾಡಿದೆ. ಚುನಾವಣಾ ಆಯೋಗದ ಜಾಲತಾಣ, ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿ, ಮತದಾರರ ನೋಂದಣಿ ಅಧಿಕಾರಿ, ಸಹಾಯಕ ಮತದಾರರ ನೋಂದಣಿ ಅಧಿಕಾರಿ ಕಚೇರಿಗಳನ್ನು ಕರಡು ಮತದಾರರಪಟ್ಟಿ ಲಭ್ಯವಿರಲಿದೆ ಎಂದು ತಿಳಿಸಿದೆ.

ಸಂಬಂಧಿತ ಕ್ಷೇತ್ರಗಳ ಮತದಾರರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ, ತಮ್ಮ ಮಾಹಿತಿ ಸರಿಯಾಗಿ ಇದೆಯೇ ಎಂಬುದನ್ನು ಪರಿಶೀಲಿಸಿ ಕೊಳ್ಳಬೇಕು. ಯಾವುದೇ ಆಕ್ಷೇಪ ಮತ್ತು ಮನವಿಗಳು ಇದ್ದರೆ, ಜನವರಿ 3ರಿಂದ ಜನವರಿ 24ರವರೆಗೆ ಸಲ್ಲಿಸಬಹುದು. ಫೆಬ್ರುವರಿ 7ರ ಒಳಗೆ ಅವುಗಳನ್ನು ವಿಲೇವಾರಿ ಮಾಡಲಾಗುತ್ತದೆ. ಫೆಬ್ರುವರಿ 14ಕ್ಕೆ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.

ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ನಮೂನೆ–6, ಅನಿವಾಸಿ ಭಾರತೀಯರು ನಮೂನೆ–6ಎ, ಆಕ್ಷೇಪಗಳನ್ನು ನಮೂನೆ–7 ಮತ್ತು ವಿಳಾಸ ಬದಲಾವಣೆಗಳನ್ನು ನಮೂನೆ–8ರ ಮೂಲಕ ಸಲ್ಲಿಸಬೇಕು. ಸಂಬಂಧಿತ ಮತಗಟ್ಟೆ ಅಧಿಕಾರಿಗಳಿಗೆ ಈ ಅರ್ಜಿಗಳನ್ನು ಸಲ್ಲಿಸಬಹುದು. ಆಯೋಗದ ಮೊಬೈಲ್‌ ಅಪ್ಲಿಕೇಷನ್‌, ಜಾಲತಾಣದಲ್ಲಿ ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. 

Press Note. Letter dated-03.01.2026 (3).pdf
ಓಪನ್ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.