ಅರಕಲಗೂಡು: ಲಾಕ್‌ಡೌನ್‌ನಿಂದಾಗಿ, ಹಸಿರು ಮೆಣಸಿನಕಾಯಿಯನ್ನು ಮಾರುಕಟ್ಟೆಗೆ ಸಾಗಿಸಲಾಗದ ತಾಲ್ಲೂಕಿನ ರೈತರಿಬ್ಬರು, ಫಸಲು ಸಹಿತ ಗಿಡಗಳನ್ನು ಬುಧವಾರ ನಾಶಪಡಿಸಿದ್ದಾರೆ.
ತಾಲ್ಲೂಕಿನ ಮದಲಾಪುರ ಗ್ರಾಮದ ಕೃಷಿಕರಾದ ರಂಗಸ್ವಾಮಿ ಮತ್ತು ಲೋಕೇಶ್ ಅವರು, 2 ಎಕರೆ ಜಮೀನಿನಲ್ಲಿ ಸುಮಾರು ₹ 2 ಲಕ್ಷ ವೆಚ್ಚ ಮಾಡಿ ಬೆಳೆದಿದ್ದ ಹಸಿರು ಮೆಣಸಿನಕಾಯಿ ಬೆಳೆಯನ್ನು ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಿಸಿದ್ದಾರೆ.
‘ಪ್ರತಿವರ್ಷ ಅತಿವೃಷ್ಟಿಗೆ ಅಥವಾ ಅನಾವೃಷ್ಟಿಯಿಂದ ನಷ್ಟ ಅನುಭವಿಸುತ್ತಿದ್ದೆವು. ಈ ಬಾರಿ ಸಸಿ ನಾಟಿ ಮಾಡಿದ್ದ ಸಂದರ್ಭದಲ್ಲಿ ಕಾಡಾನೆಗಳು ದಾಳಿ ಮಾಡಿ ಪಂಪ್‌ಸೆಟ್, ಜೆಟ್‌ಗಳನ್ನು ತುಳಿದು ಹಾಳುಗೆಡವಿದ್ದವು. ಅಷ್ಟಾದರೂ ಎದೆಗುಂದದೆ ಬೆಳೆ ಉಳಿಸಿಕೊಂಡಿದ್ದೆವು. ಫಸಲು ಕೂಡ ಸಮೃದ್ಧವಾಗಿ ಬಂದಿತ್ತು. ಅದರೆ, ಲಾಕ್‌ಡಾನ್‌ನಿಂದಾಗಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಈ ರೈತರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.