ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳದಲ್ಲಿ ಚಹಾ ವಿತರಿಸಲು ‘ಚಾಯ್ ಪಾಯಿಂಟ್’ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೆ.ಎಂ.ಎಫ್ ತಿಳಿಸಿದೆ.
ಈ ಒಪ್ಪಂದದ ಭಾಗವಾಗಿ ಕುಂಭಮೇಳದಾದ್ಯಂತ ಚಾಯ್ ಪಾಯಿಂಟ್ 10 ಮಳಿಗೆಗಳನ್ನು ಸ್ಥಾಪಿಸಲಿದ್ದು, ಸುಮಾರು 1 ಕೋಟಿ ಕಪ್ ಚಹಾ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ. ಆ ಮೂಲಕ ಒಂದೇ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಚಾಹ ಮಾರಿದ ಗಿನ್ನಿಸ್ ವಿಶ್ವ ದಾಖಲೆಯನ್ನೂ ಮಾಡಲಾಗುವುದು ಎಂದು ಕೆ.ಎಂ.ಎಫ್ ಪ್ರಕಟಣೆಯಲ್ಲಿ ಹೇಳಿದೆ.
ಮಹಾ ಕುಂಭಮೇಳದಲ್ಲಿ ಸವಿಯುವ ಪ್ರತೀ ಕಪ್ ಚಾಹ ಕೂಡ ನಂದಿನಿಯ ಶ್ರೀಮಂತ ಹಾಗೂ ಉತ್ತಮ ಗುಣಮಟ್ಟದ ಹಾಲಿನಿಂದ ತಯಾರಿಸಲಾಗುತ್ತದೆ. ಚಾಹ ಪ್ರಿಯರಿಗೆ ಸಂತೋಷದ ಅನುಭವ ನೀಡಲಿದೆ ಎಂದು ಪ್ರಕಟಣೆ ಹೇಳಿದೆ.
ಚಾಹದ ಜೊತೆಗೆ ನಂದಿನಿಯ ಇತರ ಉತ್ಪನ್ನಗಳಾದ ಸಿಹಿತಿಂಡಿ ಹಾಗೂ ಮಿಲ್ಕ್‌ಶೇಕ್‌ಗಳನ್ನು ಮಾರಾಟ ಮಾಡಲಾಗುವುದು ಎಂದು ಅದು ಹೇಳಿದೆ.
ಉತ್ತರ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸುವ ಸಲುವಾಗಿ ನಂದಿನಿ ಈ ಹೆಜ್ಜೆ ಇಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.