ADVERTISEMENT

'ಇಷ್ಟು ಒಳ್ಳೆಯ ಆಡಳಿತ ಇನ್ಯಾರು ಕೊಡ್ತಾರೆ': ಬೊಮ್ಮಾಯಿ ವಿರುದ್ಧ ಡಿಕೆಶಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮಾರ್ಚ್ 2022, 7:40 IST
Last Updated 7 ಮಾರ್ಚ್ 2022, 7:40 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್   

ಬೆಂಗಳೂರು: ಜನಸ್ನೇಹಿ ಪೊಲೀಸರು ಧನದಾಹಿಗಳಾಗಿದ್ದಾರೆ, ಫಿಕ್ಸಿಂಗ್‌, ಮಾಮೂಲಿ ವಸೂಲಿ ಸೌಖ್ಯವಾಗಿ ನಡೆಯುತ್ತಿದೆ. ಇಷ್ಟು ಒಳ್ಳೆಯ ಆಡಳಿತವನ್ನು ನಿಮ್ಮನ್ನು ಬಿಟ್ರೆ ಇನ್ಯಾರು ಕೊಡ್ತಾರೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.

ಪೊಲೀಸ್ ಇಲಾಖೆಯ 'ವರ್ಗಾವಣೆ ದಂಧೆ' ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ 'ಕಾಸು ಕೊಟ್ಟರಷ್ಟೇ ಪೊಲೀಸ್‌ ಬಾಸ್' ವರದಿಯನ್ನು ಉಲ್ಲೇಖಿಸಿ ಶಿವಕುಮಾರ್ ಟ್ವೀಟ್‌ ಮಾಡಿದ್ದಾರೆ.

'ಅಭಿನಂದನೆಗಳು ಮುಖ್ಯಮಂತ್ರಿಗಳೇ,ನಿಮ್ಮ ಸರ್ಕಾರದ ಅದರಲ್ಲೂ ಗೃಹ ಇಲಾಖೆಯ ದಕ್ಷತೆ ಬಗ್ಗೆ ದಿನಪತ್ರಿಕೆಯಲ್ಲಿ ಹಾಡಿ ಹೊಗಳಲಾಗಿದೆ. ಜನಸ್ನೇಹಿ ಪೊಲೀಸರು ಧನದಾಹಿಗಳಾಗಿದ್ದಾರೆ, ಫಿಕ್ಸಿಂಗ್‌, ಮಾಮೂಲ್‌ ವಸೂಲಿ ಸೌಖ್ಯವಾಗಿ ನಡೆಯುತ್ತಿದೆ. ಇಷ್ಟು ಒಳ್ಳೆಯ ಆಡಳಿತವನ್ನು ನಿಮ್ಮನ್ನು ಬಿಟ್ರೆ ಇನ್ಯಾರು ಕೊಡ್ತಾರೆ?ಬಿಜೆಪಿಯವರೇ ಇದಕ್ಕೇನಂತೀರಿ?' ಎಂದುಸಿಎಂ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

ಕಾನೂನು ಹಾಗೂ ಸಮಾಜದ ರಕ್ಷಕರಾಗಿರುವ ಕೆಲ ಪೊಲೀಸರೇ, ಮಾಫಿಯಾ ಜೊತೆ ಕೈ ಜೋಡಿಸಿ ‘ಭಕ್ಷಕ’ರಾಗಿ ಜನರನ್ನು ಕಾಡುತ್ತಿರುವ ದೂರುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ.ಹಣ ನೀಡಿ ಆಯಕಟ್ಟಿನ ಸ್ಥಾನ ಗಿಟ್ಟಿಸುವ ಪೊಲೀಸರು, ಹಣ ಮರು ಸಂಪಾದಿಸಲು ಅನೇಕ ದಾರಿಗಳನ್ನು ಹಿಡಿಯುತ್ತಾರೆ ಎಂದು ಪ್ರಜಾವಾಣಿ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.