ADVERTISEMENT

ವಿಷಯ ತಜ್ಞರ ಕೊರತೆ: ಪ್ರಗತಿ ಕುಂಠಿತ

ಒಳನೋಟ *ವಿವಿಗಳಲ್ಲಿ ಕನ್ನಡ ಅಧ್ಯಯನ ಕೇಂದ್ರದ ದುಸ್ಥಿತಿ

ನವೀನ್ ಕುಮಾರ್‌ ಎನ್.
Published 30 ನವೆಂಬರ್ 2019, 20:23 IST
Last Updated 30 ನವೆಂಬರ್ 2019, 20:23 IST
ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ, ಭಾಷಾವಿಜ್ಞಾನ, ಜಾನಪದ, ದಕ್ಷಿಣ ಭಾರತೀಯ ಅಧ್ಯಯನ ವಿಷಯದಲ್ಲಿ ಎಂ.ಎ, ಭಾಷಾಂತರ ವಿಷಯದಲ್ಲಿ ಎಂಫಿಲ್, ಭಾಷಾವಿಜ್ಞಾನ, ಜಾನಪದ, ಭಾರತೀಯ ಸಾಹಿತ್ಯ, ಅನುವಾದ ವಿಷಯದಲ್ಲಿ ಡಿಪ್ಲೊಮಾ ಕೋರ್ಸ್‌ ಗಳು ನಡೆ ಯುತ್ತಿವೆ. ಇದಲ್ಲದೇ ವಿಶ್ವಕೋಶ, ಗ್ರಂಥ ಸಂಪಾದನೆ, ‘ಎಫಿಗ್ರಾಫಿಯ ಕರ್ನಾಟಕ’ ಹಾಗೂ ಭಾಷಾಂತರ ಯೋಜನೆಗಳನ್ನು ಪ್ರಮುಖವಾಗಿ ಕೈಗೊಂಡಿದೆ.

ವಿಶ್ವಕೋಶ ಯೋಜನೆಯಲ್ಲಿ ಸಾಮಾನ್ಯ ವಿಶ್ವಕೋಶದ 8 ಮತ್ತು 9ನೇ ಸಂಪುಟಗಳ ಪರಿಷ್ಕರಣೆ ಕಾರ್ಯ ಸಾಗಿದ್ದು, ಒಂದು ತಿಂಗಳಲ್ಲಿ ಪ್ರಕಟಗೊಳ್ಳಲಿವೆ. ವಿಷಯ ವಿಶ್ವಕೋಶ ದಲ್ಲಿ ಮಾನವಶಾಸ್ತ್ರ, ವೈದ್ಯ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಭೂವಿಜ್ಞಾನ, ಸಸ್ಯವಿಜ್ಞಾನ ಸಂಪುಟಗಳ ಕೆಲಸ ನಡೆದಿದ್ದು, ಈ ಐದೂ ಸಂಪುಟಗಳನ್ನು ಆರು ತಿಂಗಳಲ್ಲಿ ಹೊರತರುವ ಉದ್ದೇಶ ಹೊಂದಿದೆ.

ಗ್ರಂಥ ಸಂಪಾದನಾ ವಿಭಾಗದಲ್ಲಿ 6 ಸಾವಿರ ಹಸ್ತಪ್ರತಿಗಳಿದ್ದು, ಅವುಗಳಲ್ಲಿ 300 ಪ್ರಕಟಣೆ ಕಂಡಿವೆ. ಎಪಿಗ್ರಾಫಿಯ ಕರ್ನಾಟಕ ವಿಭಾಗವು ಜಿಲ್ಲಾವಾರು ಶಾಸನಗಳನ್ನು ಸಂಪಾದಿಸಿ 25 ಸಂಪುಟ ಗಳಲ್ಲಿ ಪ್ರಕಟಿಸುವ ಯೋಜನೆ ಹಮ್ಮಿ ಕೊಂಡಿತ್ತು. ಸದ್ಯಕ್ಕೆ 12 ಸಂಪುಟಗಳು ಮಾತ್ರ ಪ್ರಕಟಗೊಂಡಿವೆ. ಸರ್ಕಾ ರವು ಅಧ್ಯಯನ ಸಂಸ್ಥೆಗೆ ₹1 ಕೋಟಿ ನೀಡಿದ್ದು, ಈ ಅನುದಾನದಲ್ಲಿ ಸಾಮ್ರಾಜ್ಯ ಆಧಾರಿತ ಶಾಸನ ಸಂಪುಟ ವನ್ನು ಹೊರಗುತ್ತಿಗೆ ಮೂಲಕ ಹೊರತರಲಾಗಿದೆ.

ಭಾಷಾಂತರ ವಿಭಾಗವು ಪಿ.ವಿ.ಕಾಣೆಯವರ ‘ಧರ್ಮಶಾಸ್ತ್ರದ ಇತಿಹಾಸ’ ಕೃತಿಯನ್ನು ಕನ್ನಡಕ್ಕೆ ತಂದಿದ್ದು, 5 ಸಂಪುಟಗಳನ್ನು ಹೊರತ ರಲಾಗಿದೆ. ಉಳಿದ ಸಂಪುಟಗಳ ಕಾರ್ಯ ಸ್ಥಗಿತಗೊಂಡಿದೆ. ಸಂಶೋಧಕಿ ಡಾ.ವೈ.ಸಿ.ಭಾನುಮತಿ ಪ್ರಾಚೀನ ಹಸ್ತಪ್ರತಿಗಳನ್ನು ಸಂಪಾದಿಸಿದ್ದು, ಪ್ರಕಟಣೆಗೆ ಸಿದ್ಧತೆ ನಡೆದಿದೆ.

ಅಧ್ಯಯನ ಸಂಸ್ಥೆ ಕೈಗೊಂಡ ಯೋಜನೆಗಳು 25 ವರ್ಷಗಳ ಕಾಲ ಅತ್ಯುತ್ತಮವಾಗಿ ಕಾರ್ಯರೂಪಕ್ಕೆ ಬಂದವು. ಆಯಾ ವಿಷಯ ಪರಿಣತರು ನಿವೃತ್ತಿಯಾದ ಬಳಿಕ ಈ ಯೋಜನೆಗಳು ಕುಂಠಿತಗೊಂಡವು. ಇಲ್ಲಿ ನಾಲ್ವರು ಕಾಯಂ ಕನ್ನಡ ಅಧ್ಯಾಪಕರು, 6 ಅತಿಥಿ ಉಪನ್ಯಾಸಕರಿದ್ದಾರೆ. 12 ವರ್ಷಗಳಿಂದ ಹುದ್ದೆಗಳ ಭರ್ತಿ ಆಗಿಲ್ಲ. ಇದರಿಂದ ನಿರೀಕ್ಷಿತ ಪ್ರಗತಿ ಕಾಣಲು ಸಾಧ್ಯವಾಗುತ್ತಿಲ್ಲ. ಆದರೂ, ಹೊರಗುತ್ತಿಗೆ ಮೂಲಕ ಕೆಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ತಳವಾರ ತಿಳಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.