ADVERTISEMENT

ಹೈಕಮಾಂಡ್ ಹೇಳಿದರೆ ನಾನೂ ಕೇಳಬೇಕು, ಡಿಕೆಶಿಯೂ ಕೇಳಬೇಕು: ಸಿದ್ದರಾಮಯ್ಯ ಗರಂ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:28 IST
Last Updated 11 ಫೆಬ್ರುವರಿ 2026, 7:28 IST
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಹೈಕಮಾಂಡ್ ನಿರ್ಧಾರ ಅಂತಿಮ ಎಂದು ಎಷ್ಟು ಸಲ ಹೇಳಬೇಕು. ಹೈಕಮಾಂಡ್ ಹೇಳಿದರೆ ನಾನೂ ಕೇಳಬೇಕು. ಅವರೂ (ಡಿ.ಕೆ. ಶಿವಕುಮಾರ್) ಕೇಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮ್ಯಯ ಗರಂ ಆದರು.

ನಾಯಕತ್ವ ಬದಲಾವಣೆ ವಿಚಾರವಾಗಿ ಸುದ್ದಿಗಾರರು ಬುಧವಾರ ಪ್ರಸ್ತಾಪಿಸಿದಾಗ, ‘ಪದೇ ಪದೇ ಯಾಕೆ ನಾಯಕತ್ವ ಬದಲಾವಣೆ ಬಗ್ಗೆ ಕೇಳುತ್ತೀರಿ. ಮೂರು ತಿಂಗಳುಗಳಿಂದ ಇದನ್ನೇ ಕೇಳುತ್ತಿದ್ದೀರಿ. ಯಾರನ್ನೂ ಈ ಪ್ರಶ್ನೆ ಮತ್ತೆ ಕೇಳಬೇಡಿ’ ಎಂದು ಸಿಡಿಮಿಡಿಗೊಂಡರು.

‘ಎಷ್ಟು ಸಲ ಇದನ್ನೇ ಕೇಳುತ್ತೀರಾ’ ಎಂದೂ ಪ್ರಶ್ನಿಸಿದರು.

ADVERTISEMENT

ಕೆಲವು ಶಾಸಕರು ವಿದೇಶ ಪ್ರವಾಸ ಹೊರಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರ ದುಡ್ಡಲ್ಲಿ ಅವರು ಹೋದರೆ ತಪ್ಪೇನು ? ನನ್ನ ಗಮನಕ್ಕೆ ಇದು ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.