
ಸೈಬರ್ ವಂಚನೆ
ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಸಂದೇಶ ನಂಬಿದ ಮಹಿಳಾ ಟೆಕಿಯೊಬ್ಬರು ₹ 93 ಲಕ್ಷ ಕಳೆದುಕೊಂಡಿದ್ದಾರೆ.
ಸಿದ್ಧವೀರಪ್ಪ ಬಡಾವಣೆಯ 38 ವರ್ಷದ ಟೆಕಿ ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿದವರು. ಡಿ.8ರಿಂದ ಫೆ.5ರ ಅವಧಿಯಲ್ಲಿ ಈ ಹಣವನ್ನು ಕಳೆದುಕೊಂಡಿದ್ದಾರೆ.
‘ಪತಿಯ ಮೊಬೈಲ್‌ನಲ್ಲಿ ‘ವಿಐಪಿ ರುದ್ರಾ ಷೇರ‍್ಸ್’ ಎಂಬ ವಾಟ್ಸ್‌ಆಪ್ ಗ್ರೂಪ್ ಇದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂಬ ಸಂದೇಶವೊಂದು ಬಂದಿತ್ತು. ಇದನ್ನು ನಂಬಿ ನನ್ನ ಹಾಗೂ ಪತಿಯ ಬ್ಯಾಂಕ್ ಖಾತೆಯಿಂದ 10 ಬಾರಿ ಹಣ ವರ್ಗಾವಣೆ ಮಾಡಿದ್ದೆ. ₹ 17 ಲಕ್ಷ, ₹ 16 ಲಕ್ಷ, ₹ 14 ಲಕ್ಷ ಸೇರಿದಂತೆ ಹಲವು ಬಾರಿ ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿದ್ದೆ’ ಎಂದು ಸಿಇಎನ್ ಠಾಣೆಗೆ ನೀಡಿದ ದೂರಿನಲ್ಲಿ ಟೆಕಿ ತಿಳಿಸಿದ್ದಾರೆ.
ಲಾಭಾಂಶದ ಹಣವನ್ನು ನಗದಿಕರಿಸಿಕೊಳ್ಳಲು ಮುಂದಾದಾಗ ತೆರಿಗೆ ಪಾವತಿಸುವಂತೆ ಸೂಚನೆ ಬಂದಿದೆ. ಇದರಿಂದ ಅನುಮಾನಗೊಂಡ ಟೆಕಿ ಪೊಲೀಸರು ಸಂಪರ್ಕಿ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.