
ಪ್ರಜಾವಾಣಿ ವಾರ್ತೆನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿ ಹೆಸರಿನಲ್ಲಿ ಕಟ್ಟಿದ ವಾಣಿವಿಲಾಸ ಸಾಗರ ಜಲಾಶಯ ಮಧ್ಯಕರ್ನಾಟಕ ಭಾಗದ ಜನರ ಜೀವನಾಡಿಯಾಗಿದೆ. ದೇಶದ ಹಲವು ಭಯೊತ್ಪಾದನಾ ಚಟುವಟಿಕೆಗಳು ನಡೆದಾಗ ಜಲಾಶಯಗಳಿಗೆ ಭದ್ರತೆ ಒದಗಿಸಲಾಗುತ್ತದೆ. ಆದರೆ ವಿವಿ ಸಾಗರ ಜಲಾಶಯಕ್ಕೆ ಇಲ್ಲಿಯವರೆಗೂ ಯಾವ ಭದ್ರತೆಯೂ ಇಲ್ಲವಾಗಿದೆ. ರಾಜ್ಯದ ಮೊಟ್ಟ ಮೊದಲ ಜಲಾಶಯ ಎನ್ನಿಸಿರುವ ವಾಣಿವಿಲಾಸ ಸಾಗರದ ಭದ್ರತೆಯನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.