ADVERTISEMENT

ಕದನ ವಿರಾಮ ವಿಳಂಬ | ಹಮಾಸ್ ಬೇಡಿಕೆ ಈಡೇರಿಸಿಲ್ಲ, ದಾಳಿ ಮುಂದುವರಿದಿದೆ: ಇಸ್ರೇಲ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 9:01 IST
Last Updated 19 ಜನವರಿ 2025, 9:01 IST
<div class="paragraphs"><p>ಗಾಜಾ ಪಟ್ಟಿಯ ಜಲಾ ಬೀದಿಯಲ್ಲಿ ಇಸ್ರೇಲ್‌ ವಾಯುದಾಳಿಯಿಂದ ಹಾನಿಗೊಳದ ಕಾರು ಪರಿಶೀಲಿಸಿದ ಸ್ಥಳೀಯರು</p></div>

ಗಾಜಾ ಪಟ್ಟಿಯ ಜಲಾ ಬೀದಿಯಲ್ಲಿ ಇಸ್ರೇಲ್‌ ವಾಯುದಾಳಿಯಿಂದ ಹಾನಿಗೊಳದ ಕಾರು ಪರಿಶೀಲಿಸಿದ ಸ್ಥಳೀಯರು

   

ಜೆರುಸಲೇಂ: ಮೊದಲ ದಿನ ಬಿಡುಗಡೆ ಮಾಡಬೇಕಾದ ಒತ್ತೆಯಾಳುಗಳ ಪಟ್ಟಿಯನ್ನು ಇಸ್ರೇಲ್‌ಗೆ ಕಳುಹಿಸುವ ಜವಾಬ್ದಾರಿಯನ್ನು ಹಮಾಸ್ ಪೂರೈಸದ ಕಾರಣ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಜಾರಿ ವಿಳಂಬವಾಗಿದೆ ಎಂದು ಇಸ್ರೇಲ್‌ ಸೇನೆಯ ವಕ್ತಾರ ಅಡ್ಮಿರಲ್ ಡೇನಿಯಲ್‌ ಹಗರಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕದನ ವಿರಾಮ ಒಪ್ಪಂದ ಜಾರಿಗೆ ಬರುವವರಿಗೆ ಗಾಜಾ ಪಟ್ಟಿಯಲ್ಲಿ ದಾಳಿ ಮುಂದುವರೆಸುವ ಸ್ವಾತಂತ್ರ್ಯವನ್ನು ನಮ್ಮ ಸೇನಾಪಡೆಗಳು ಉಳಿಸಿಕೊಂಡಿವೆ’ ಎಂದು ಹೇಳಿದ್ದಾರೆ.

ADVERTISEMENT

ಕದನ ವಿರಾಮ ಜಾರಿಗೆ ತರಲು ನಾವು ಸಂಪೂರ್ಣವಾಗಿ ಸಿದ್ಧವಿದ್ದೇವೆ. ಆದರೆ, ಹಮಾಸ್ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದರೆ ಮತ್ತೆ ದಾಳಿ ಮುಂದುವರಿಸುತ್ತೇವೆ ಎಂದೂ ಹಗರಿ ತಿಳಿಸಿದ್ದಾರೆ.

ಈಚೆಗೆ ಕದನ ವಿರಾಮ ಘೋಷಿಸಲು ಇಸ್ರೇಲ್‌ ಸೇನೆ ಮತ್ತು ಹಮಾಸ್ ಬಂಡುಕೋರರ ಸಂಘಟನೆ ಸಮ್ಮತಿಸಿದ್ದವು. ಕದನ ವಿರಾಮ ಸ್ಥಳೀಯ ಕಾಲಮಾನ ಇಂದು (ಭಾನುವಾರ) ಬೆಳಿಗ್ಗೆ 6.30ರಿಂದ ಜಾರಿಗೆ ಬರಬೇಕಿತ್ತು.

ಗಾಜಾಪಟ್ಟಿಯಲ್ಲಿ ಕದನ ವಿರಾಮ ಘೋಷಣೆ ಕುರಿತು ಉಭಯತ್ರರ ನಡುವೆ ಮೂಡಿದ್ದ ಒಡಂಬಡಿಕೆಗೆ ಇಸ್ರೇಲ್‌ನ ಸಚಿವ ಸಂಪುಟವೂ ಅನುಮೋದನೆ ನೀಡಿತ್ತು. ಮಾತುಕತೆಗೆ ಕತಾರ್ ಮಧ್ಯಸ್ಥಿಕೆ ವಹಿಸಿತ್ತು.

ಈ ಮೂಲಕ ಇತ್ತೀಚಿನ ವರ್ಷಗಳಲ್ಲಿ ಸುದೀರ್ಘ ಅವಧಿ ನಡೆದ ಭೀಕರ, ಗಂಭೀರ ಸ್ವರೂಪದ ಯುದ್ಧವು, 15 ತಿಂಗಳ ತರುವಾಯ ತಾತ್ಕಾಲಿಕವಾಗಿ ಅಂತ್ಯಗೊಂಡಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.