ADVERTISEMENT

ಮಾಲ್ದೀವ್ಸ್‌ನೊಂದಿಗೆ ದ್ವಿಪಕ್ಷೀಯ ಒಪ್ಪಂದ ವೃದ್ಧಿಗೆ ಯೋಜನೆ: ಚೀನಾ ಅಧ್ಯಕ್ಷ ಷಿ

ಏಜೆನ್ಸೀಸ್
Published 10 ಜನವರಿ 2024, 13:04 IST
Last Updated 10 ಜನವರಿ 2024, 13:04 IST
<div class="paragraphs"><p>ಷಿ ಜಿನ್‌ಪಿಂಗ್‌&nbsp;</p></div>

ಷಿ ಜಿನ್‌ಪಿಂಗ್‌ 

   

ರಾಯಿಟರ್ಸ್ ಚಿತ್ರ

ಬೀಜಿಂಗ್: ‘ಮಾಲ್ದೀವ್ಸ್‌ನೊಂದಿಗೆ ದ್ವಿಪಕ್ಷೀಯ ಒಪ್ಪಂದವನ್ನು ಇನ್ನಷ್ಟು ಸುಭದ್ರಗೊಳಿಸಲು ಹೊಸ ಯೋಜನೆಯನ್ನು ಅಭಿವೃದ್ಧಿಪಡಿಸುವತ್ತ ಉತ್ಸುಕತೆ ಹೊಂದಿದ್ದೇವೆ’ ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಹೇಳಿದ್ದಾರೆ.

ADVERTISEMENT

ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರೊಂದಿಗೆ ಬುಧವಾರ ಸಭೆ ನಡೆಸಿದ ನಂತರ ಷಿ ಈ ವಿಷಯವನ್ನು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಮಾಲ್ದೀವ್ಸ್‌ನ ಸಚಿವರ ಹೇಳಿಕೆಯಿಂದಾಗಿ ಭಾರತ ಮತ್ತು ಮಾಲ್ದೀವ್ಸ್‌ನ ಸಂಬಂಧ ಹದಗೆಟ್ಟಿದೆ. ಮಾಲ್ದೀವ್ಸ್‌ ಪ್ರವಾಸ ಕೈಗೊಂಡಿದ್ದ ಪ್ರವಾಸಿಗರ ಟಿಕೆಟ್‌ಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ ಚೀನಾದಿಂದ ಹೆಚ್ಚಿನ ಪ್ರವಾಸಿಗರನ್ನು ಮಾಲ್ದೀವ್ಸ್‌ಗೆ ಕಳುಹಿಸುವಂತೆ ಮುಯಿಜು ಚೀನಾವನ್ನು ಕೋರಿದ್ದಾರೆ.

‘ಚೀನಾ ನಮ್ಮ ಅತ್ಯಂತ ಆತ್ಮೀಯ ರಾಷ್ಟ್ರ ಹಾಗೂ ಅಭಿವೃದ್ಧಿಯ ಜತೆಗಾರ. 2014ರಲ್ಲಿ ಚೀನಾ ಅಧ್ಯಕ್ಷ ಷಿ ಚಾಲನೆ ನೀಡಿದ ಬೆಲ್ಟ್‌ ಅಂಡ್ ರೋಡ್‌ ಇನಿಷಿಯೇಟಿವ್‌ (ಬಿಆರ್‌ಐ) ಮಾಲ್ದೀವ್ಸ್‌ನ ಇತಿಹಾಸದಲ್ಲೇ ಅತ್ಯಂತ ಮಹತ್ವದ ಮೂಲಸೌಕರ್ಯ ಯೋಜನೆಯಾಗಿದೆ’ ಎಂದು ಮುಯಿಜು ಬಣ್ಣಿಸಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಅಂತರ್ಗತ ಪ್ರವಾಸೋಧ್ಯಮ ವಲಯ ಸೃಷ್ಟಿಸಲು ಉಭಯ ರಾಷ್ಟ್ರಗಳು 50 ದಶಲಕ್ಷ ಅಮೆರಿಕನ್ ಡಾಲರ್‌ ಮೊತ್ತದ ಯೋಜನೆಗೆ ಸಹಿ ಹಾಕಿವೆ ಎಂದು ಮಾಲ್ದೀವ್ಸ್‌ನ ಮಾಧ್ಯಮಗಳು ವರದಿ ಮಾಡಿವೆ.

ಭಾರತದಿಂದಲೇ ಅತಿ ಹೆಚ್ಚು ಪ್ರವಾಸಿಗರು

2023ರಲ್ಲಿ ಮಾಲ್ದೀವ್ಸ್‌ ಪ್ರವಾಸ ಕೈಗೊಳ್ಳುವವರಲ್ಲಿ ಭಾರತೀಯರೇ ಅತಿ ಹೆಚ್ಚು. ಭಾರತದಿಂದ 2,09,198 ಪ್ರವಾಸಿಗರು, ರಷ್ಯಾದಿಂದ 2,09,146, ಚೀನಾದಿಂದ 1,87,118 ಪ್ರವಾಸಿಗರು ಮಾಲ್ದೀವ್ಸ್‌ ಪ್ರವಾಸ ಕೈಗೊಂಡಿದ್ದಾರೆ. 2022ರಲ್ಲೂ ಮಾಲ್ದೀವ್ಸ್‌ ಪ್ರವಾಸ ಕೈಗೊಂಡವರಲ್ಲಿ ಭಾರತೀಯರೇ ಮೊದಲು. ರಷ್ಯಾ 2ನೇ ಸ್ಥಾನ ಮತ್ತು ಬ್ರಿಟನ್‌ 3ನೇ ಸ್ಥಾನದಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.