ಜಿನೀವಾ: ಕೋವಿಡ್–19 ಲಸಿಕೆಯ ಬೂಸ್ಟರ್ ಡೋಸ್ ವಿಚಾರವಾಗಿ ಚರ್ಚೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಜ್ಞರ ಕಾರ್ಯತಂತ್ರ ಸಲಹಾ ಗುಂಪು ಇಂದು (ಮಂಗಳವಾರ) ಸಭೆ ಸೇರಲಿದೆ.
ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ವಿಶ್ವದಾದ್ಯಂತ ಹರಡುತ್ತಿರುವ ಬೆನ್ನಲ್ಲೇ ಕೋವಿಡ್ ಲಸಿಕೆಯ ಬೋಸ್ಟರ್ ಡೋಸ್ ನೀಡುವ ಅಗತ್ಯ ಇದೆಯೇ ಎಂಬ ಕುರಿತ ಚರ್ಚೆಯೂ ಆರಂಭವಾಗಿದೆ.
ಡಬ್ಲ್ಯುಎಚ್‌ಒ ತಜ್ಞರ ತಂಡವು ಬೂಸ್ಟರ್ ಡೋಸ್ ನೀಡುವುದರಿಂದ ಆಗಬಹುದಾದ ಪರಿಣಾಮ, ಸುರಕ್ಷತೆ, ದೇಹದಲ್ಲಿ ಸೃಷ್ಟಿಯಾಗಬಹುದಾದ ಪ್ರತಿಕಾಯಗಳು, ಇದಕ್ಕೆ ಸಂಬಂಧಿಸಿದ ಪುರಾವೆಗಳ ಬಗ್ಗೆ ಚರ್ಚೆ ನಡೆಸಲಿದೆ.
ಭಾರತದಲ್ಲಿಯೂ ಬೂಸ್ಟರ್ ಡೋಸ್ ನೀಡಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸೋಮವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸಭೆ ಸೇರಿತ್ತು. ಆದರೆ, ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಇದನ್ನೂ ಓದಿ:ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್: ಮೂಡದ ಸಹಮತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.