ADVERTISEMENT

ನೊಬೆಲ್ ಶಾಂತಿ ಪ್ರಶಸ್ತಿಯನ್ನು ಟ್ರಂಪ್‌ಗೆ ಅರ್ಪಿಸುತ್ತೇನೆ: ಮಾರಿಯಾ ಪುನರುಚ್ಚಾರ

ಏಜೆನ್ಸೀಸ್
Published 6 ಜನವರಿ 2026, 9:52 IST
Last Updated 6 ಜನವರಿ 2026, 9:52 IST
<div class="paragraphs"><p>ಡೊನಾಲ್ಡ್‌ ಟ್ರಂಪ್ ಮತ್ತು&nbsp;ಮಾರಿಯಾ ಕೊರಿನಾ ಮಚಾದೊ</p></div>

ಡೊನಾಲ್ಡ್‌ ಟ್ರಂಪ್ ಮತ್ತು ಮಾರಿಯಾ ಕೊರಿನಾ ಮಚಾದೊ

   

ವಾಷಿಂಗ್ಟನ್: ಅಮೆರಿಕದ ಸೇನಾಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೊಲಸ್‌ ಮಡೂರೊ ಅವರನ್ನು ಸೆರೆಹಿಡಿದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮಗೆ ಲಭಿಸಿರುವ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರೊಂದಿಗೆ ಹಂಚಿಕೊಳ್ಳುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ.

‘ನಾನು ಸ್ಪಷ್ಟವಾಗಿ ಹೇಳುತ್ತೇನೆ. ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿದ ತಕ್ಷಣವೇ ನಾನು ಅದನ್ನು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಅರ್ಪಿಸುವುದಾಗಿ ಹೇಳಿದ್ದೆ. ಏಕೆಂದರೆ ಆ ಸಮಯದಲ್ಲಿ ಟ್ರಂಪ್ ಅವರು ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದು ನಾನು ನಂಬಿದ್ದೆ. ಆದರೆ, ಜನವರಿ 3ರಂದು ಟ್ರಂಪ್ ಅವರು ಸಾಧಿಸಿದ್ದನ್ನು ಅಸಾಧ್ಯವೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಮಾರಿಯಾ ಹೇಳಿದ್ದಾರೆ.

ADVERTISEMENT

‘ಅಕ್ಟೋಬರ್‌ನಲ್ಲಿ ಟ್ರಂಪ್ ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದು ನಾನು ಭಾವಿಸಿದರೆ, ಈಗ ಊಹಿಸಿ... ಟ್ರಂಪ್ ಏನು ಮಾಡುತ್ತಾರೆಂದು ಜಗತ್ತಿಗೆ ಸಾಬೀತುಪಡಿಸಿದ್ದಾರೆ. ನನ್ನ ಪ್ರಕಾರ, ಜನವರಿ 3 (ಶನಿವಾರ) ಇತಿಹಾಸದಲ್ಲಿ ನ್ಯಾಯವು ದಬ್ಬಾಳಿಕೆಯನ್ನು ಸೋಲಿಸಿದ ದಿನವಾಗಿ ದಾಖಲಾಗುತ್ತದೆ. ಇದು ಒಂದು ಮೈಲಿಗಲ್ಲು ಎಂದರೇ ತಪ್ಪಲ್ಲ. ಇದು ವೆನೆಜುವೆಲಾದ ಜನರಿಗೆ ಮತ್ತು ನಮ್ಮ ಭವಿಷ್ಯಕ್ಕೆ ಮಾತ್ರ ದೊಡ್ಡದಲ್ಲ. ಇದು ಮಾನವೀಯತೆ, ಸ್ವಾತಂತ್ರ್ಯ ಮತ್ತು ಮಾನವ ಘನತೆಗೆ ಒಂದು ದೊಡ್ಡ ಹೆಜ್ಜೆಯಾಗಿದೆ’ ಎಂದೂ ಮಾರಿಯಾ ವಿವರಿಸಿದ್ದಾರೆ.

ಕೆಲವು ದಿನಗಳ ಹಿಂದೆ ವೆನೆಜುವೆಲಾದ ಕರಾವಳಿ ಮೂಲಕ ಸಾಗುತ್ತಿದ್ದ ಹಡಗುಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಅವರು ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಅಮೆರಿಕ ತನ್ನ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿತ್ತು. ದೇಶದ ಅನೇಕರ ಸಾವಿಗೆ ಕಾರಣವಾಗಿದ್ದ ಅಮೆರಿಕದ ಕಾರ್ಯಾಚರಣೆಯನ್ನು ಸಹಜವಾಗಿಯೇ ವೆನೆಜುವೆಲಾ ವಿರೋಧಿಸಿತ್ತು. ಆದರೆ, ಮಾರಿಯಾ ಅಮೆರಿಕದ ಕಾರ್ಯಾಚರಣೆಯನ್ನು ಸಮರ್ಥಿಸಿದ್ದರು. ಟ್ರಂಪ್ ಅವರನ್ನು ಬೆಂಬಲಿಸಿದ್ದರು.

ಇದರ ಬೆನ್ನಲ್ಲೇ ಅಮೆರಿಕದ ಪಡೆಗಳು ಶುಕ್ರವಾರ ರಾತ್ರಿ ಮಿಂಚಿನ ಕಾರ್ಯಾಚರಣೆ ನಡೆಸಿ ಹಿಡಿದು ಕರೆದೊಯ್ದಿರುವ ವೆನೆಜುವೆಲಾದ ಅಧ್ಯಕ್ಷ ನಿಕೊಲಸ್‌ ಮಡೂರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್‌ ಅವರನ್ನು ನ್ಯೂಯಾರ್ಕ್‌ನ ಬ್ರೂಕ್ಲಿನ್ ಜೈಲಿನಲ್ಲಿ ಇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.