
ದುಬೈ: ಇರಾನ್ ನೌಕಾಪಡೆಯ 9 ಹಡಗುಗಳ ಮೇಲೆ ದಾಳಿ ನಡೆಸಿ ನಾಶಪಡಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.
ನಾಶಪಡಿಸಲಾದ ಈ ಹಡಗುಗಳಲ್ಲಿ ಕೆಲವು ಬೃಹತ್ ಮತ್ತು ಪ್ರಮುಖ ನೌಕೆಗಳಾಗಿದ್ದವು ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್ ನೌಕಾಪಡೆಯ ಉಳಿದ ಹಡಗುಗಳು ಶೀಘ್ರದಲ್ಲಿಯೇ ಸಮುದ್ರದ ತಳ ತಲುಪಲಿವೆ. ಇದಲ್ಲದೆ, ನಡೆಸಿದ ಮತ್ತೊಂದು ದಾಳಿಯಲ್ಲಿ ಇರಾನ್ ನೌಕಾಪಡೆಯ ಪ್ರಧಾನ ಕಚೇರಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
'ಮಾತುಕತೆ ಬಯಸುತ್ತಿರುವ ಇರಾನ್'
ದುಬೈ: ಇರಾನ್‌ನ ಹೊಸ ಸಂಭಾವ್ಯ ನಾಯಕತ್ವವು ಅಮೆರಿಕದ ಜತೆ ಮಾತುಕತೆಗೆ ಮುಕ್ತವಾಗಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇರಾನ್‌ನ ಹೊಸ ನಾಯಕರು ಅಮೆರಿಕದ ಜತೆ ಮಾತನಾಡಲು ಬಯಸಿದ್ದಾರೆ ಎಂದಿರುವ ಅವರು, ಯಾವ ನಾಯಕರಿಂದ ಈ ಕುರಿತು ಮನವಿ ಬಂದಿದೆ ಎಂಬುದರ ಮಾಹಿತಿಯನ್ನು ಅವರು ನೀಡಲಿಲ್ಲ. ಈ ಕುರಿತು ಯಾವಾಗ ಮಾತುಕತೆ ನಡೆಯಲಿದೆ ಎಂಬುದನ್ನೂ ಅವರು ತಿಳಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.