ದಾಳಿಯಿಂದಾಗಿ ದುಬೈನ ಆಕಾಶಲ್ಲಿ ಹೊಗೆ
ದುಬೈ: ಏರ್‌ಪೋರ್ಟ್ ಸೇರಿ ಯುಎಇಯ ಹಲವು ಸ್ಥಳಗನ್ನು ಗುರಿಯಾಗಿಸಿಕೊಂಡು ಶನಿವಾರ ಇರಾನ್ ದಾಳಿ ನಡೆಸಿದೆ.
ದುಬೈ ಏರ್‌ಪೋರ್ಟ್ ಹಾಗೂ ಬುರ್ಜ್ ಅಲ್ ಅರಬ್ ಮೇಲೆ ದಾಳಿ ನಡೆಸಲಾಗಿದೆ. ಡ್ರೋನ್ ದಾಳಿ ನಡೆದಿದೆ ಎಂದು ಯುಎಒ ಅಧಿಕಾರಿಗಳು ತಿಳಿಸಿದ್ದಾರೆ.
‘ಡ್ರೋನ್ ದಾಳಿಯಿಂದಾಗಿ ಬುರ್ಜ್ ಅಲ್ ಅರಬ್ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ಹತೋಟಿಗೆ ತರಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ’ ಎಂದು ದುಬೈ ಸರ್ಕಾರದ ಮಾಧ್ಯಮ ಕಚೇರಿ ಹೇಳಿದೆ.
ವಾಯು ತಡೆ ಕಾರ್ಯಾಚರಣೆಯಿಂದಾಗಿ ಬಿದ್ದ ಅವಶೇಷಗಳಿಂದಾಗಿ ಜೆಬೆಲ್ ಅಲಿ ಬಂದರಿನ ಬರ್ತ್‌ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ.ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ ಎಂದು ದುಬೈ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಕ್ಷಿಪಣಿ ದಾಳಿಯ ಸಾಧ್ಯತೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಎಚ್ಚರಿಕೆ ನೀಡಲಾಗಿದೆ.
ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆಡೆದ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಅಬುಧಾಬಿಯ ಶೇಖ್ ಜಾಯೆದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ರಾತ್ರಿ ದಾಳಿ ನಡೆದಿದ್ದು, ಏಷ್ಯಾ ಮೂಲದ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ.
ಪವಿತ್ರ ರಂಜಾನ್ ಮಾಸ ಹಾಗೂ ಮತ್ತು ವಾರಾಂತ್ಯದಿಂದಾಗಿ ಜನರು ತಡರಾತ್ರಿಯವರೆಗೆ ಎಚ್ಚರವಿದ್ದರು. ಸೈರನ್ ಸದ್ದು ಮತ್ತು ಎಚ್ಚರಿಕೆ ಸಂದೇಶಗಳಿಂದ ಆತಂಕಕ್ಕೊಳಗಾಗಿದ್ದರು.
ಜೆಬೆಲ್ ಅಲಿ ಬಂದರಿನಲ್ಲಿಯೂ ರೀತಿಯ ದಾಳಿ ವರದಿಯಾಗಿದೆ. ಅಲ್ಲಿ ಯಾವುದೇ ಸಾವು–ನೋವಿನ ವರದಿಯಾಗಿಲ್ಲ.
ದುಬೈ ಮತ್ತು ಅಬುಧಾಬಿಯ ಶಾಲೆಗಳಿಗೆ ಗುರುವಾರದವರೆಗೆ ಆನ್‌ಲೈನ್ ತರಗತಿ ನಡೆಸುವಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.