ಮಕ್ಕಳೊಂದಿಗೆ ಇಲಾನ್ ಮಸ್ಕ್
ಎಕ್ಸ್ ಚಿತ್ರ
ವಾಷಿಂಗ್ಟನ್: ಅಮೆರಿಕದ ವಿದ್ಯುತ್ ಚಾಲಿತ ಕಾರು ತಯಾರಕ ಕಂಪನಿ ಟೆಸ್ಲಾ ಮಾಲೀಕ, ಬಿಲಿಯನೆರ್ ಇಲಾನ್ ಮಸ್ಕ್ ತಮ್ಮ ಮಗನಿಗೆ ಭಾರತೀಯ ಮೂಲದ ವಿಜ್ಞಾನಿಯ ಹೆಸರನ್ನಿಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮಗನಿಗೆ ‘ಸ್ಟ್ರೈಡರ್ ಶೇಖರ್’ ಎಂದೂ ಮಗಳಿಗೆ ‘ಕಾಮೆಟ್ ಅಜುರೆ’ ಎಂದು ನಾಮಕರಣ ಮಾಡಿದ್ದಾರೆ.
ಹೆಸರಿನ ಹಿಂದಿರುವ ಉದ್ದೇಶವನ್ನು ವಿವರಿಸಿರುವ ಮಸ್ಕ್, ‘ಸ್ಟ್ರೈಡರ್ ಎನ್ನುವುದು ಜೆಆರ್‌ಆರ್ ಟೋಲ್ಕಿನ್ ಅವರ ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಕಾದಂಬರಿಯ ಕಾಲ್ಪನಿಕ ಪಾತ್ರ ಅರಾಗೋರ್ನ್‌ನಿಂದ ಪ್ರೇರಿತವಾಗಿದೆ. ‘ಶೇಖರ್’ ಎನ್ನುವುದು, 1983 ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗೆದ್ದ ಭಾರತೀಯ-ಅಮೆರಿಕನ್ ಭೌತಶಾಸ್ತ್ರಜ್ಞ ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ ಅವರಿಂದ ಪ್ರೇರಿತವಾಗಿದೆ’ ಎಂದಿದ್ದಾರೆ.
ಮಗಳ ಹೆಸರಿನಲ್ಲಿರುವ ‘ಕಾಮೆಟ್ ಅಜುರೆ’ ಎನ್ನುವುದು ಎಲ್ಡನ್ ರಿಂಗ್ ವಿಡಿಯೊ ಗೇಮ್‌ನಲ್ಲಿ ಅತ್ಯಂತ ಶಕ್ತಿಶಾಲಿ ಸಾಲುಗಳಾಗಿವೆ ಎಂದು ವಿವರಿಸಿದ್ದಾರೆ.
ಮಸ್ಕ್ ಪತ್ನಿ ಶಿವೋನಿ ಜಿಲಿಸ್ ಅವರ ತಾಯಿ ಭಾರತದ ಪಂಜಾಬ್‌ನ ಮೂಲದವರಾಗಿದ್ದು, ಅವರ ಹೆಸರು ಶಾರದಾ ಜೆಲಿಸ್ ಎಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.