ADVERTISEMENT

ಅಮೆರಿಕದಲ್ಲಿ ‘ಎಫ್‌–35’ ಯುದ್ಧ ವಿಮಾನ ಪತನ: ಪೈಲಟ್ ಪ್ರಾಣಾಪಾಯದಿಂದ ಪಾರು

ರಾಯಿಟರ್ಸ್
Published 31 ಜುಲೈ 2025, 6:26 IST
Last Updated 31 ಜುಲೈ 2025, 6:26 IST
<div class="paragraphs"><p>‘ಎಫ್‌–35’ ಯುದ್ಧ ವಿಮಾನ</p></div>

‘ಎಫ್‌–35’ ಯುದ್ಧ ವಿಮಾನ

   

ವಾಷಿಂಗ್ಟನ್: ಕ್ಯಾಲಿಫೋರ್ನಿಯಾದ ಲೆಮೋರೆದ ಬಳಿ ‘ಎಫ್‌–35’ ಯುದ್ಧ ವಿಮಾನ ಪತನಗೊಂಡಿದೆ ಎಂದು ಅಮೆರಿಕ ನೌಕಾಪಡೆ ತಿಳಿಸಿದೆ.

ಪೈಲಟ್ ಯಶಸ್ವಿಯಾಗಿ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಮೆರಿಕ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅಪಘಾತ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಯುದ್ಧ ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

‘ಎಫ್‌–35’ ಯುದ್ಧವಿಮಾನಗಳು ರಹಸ್ಯವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದ್ದು, ವಿಶ್ವದಲ್ಲಿಯೇ ಅತ್ಯಂತ ಮಾರಕ ಎಂದೇ ಹೆಸರಾಗಿವೆ.

ಇದೇ ವರ್ಷ ಫೆಬ್ರುವರಿಯಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಮಾತುಕತೆ ನಡೆಸಿದ್ದು, ‘ಎಫ್‌–35’ ಯುದ್ಧವಿಮಾನಗಳ ಪೂರೈಕೆ ಸೇರಿದಂತೆ ಪ್ರಮುಖ ಶಸ್ತ್ರಾಸ್ತ್ರಗಳ ಖರೀದಿ ಹಾಗೂ ಜಂಟಿಯಾಗಿ ತಯಾರಿಸುವ ಕುರಿತು ಚರ್ಚಿಸಿದ್ದರು.

5ನೇ ತಲೆಮಾರಿನ, ಶಕ್ತಿಶಾಲಿ ‘ಎಫ್‌–35’ ಯುದ್ಧವಿಮಾನಗಳನ್ನು ಭಾರತಕ್ಕೆ ಪೂರೈಸಲು ನೆರವಾಗುವಂತೆ ಸಂಬಂಧಪಟ್ಟ ನೀತಿಯನ್ನು ಪರಿಶೀಲಿಸುವುದಾಗಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.