ADVERTISEMENT

ಈ ಬಾರ್‌ನಲ್ಲಿ ಎಣ್ಣೆಗೆ ದುಡ್ಡು, ಆರೋಗ್ಯ ತಪಾಸಣೆ ಉಚಿತ: ಇದು ಇರೋದು ಎಲ್ಲಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2026, 12:39 IST
Last Updated 18 ಫೆಬ್ರುವರಿ 2026, 12:39 IST
<div class="paragraphs"><p>ಮದ್ಯಪಾನ</p></div>

ಮದ್ಯಪಾನ

   

ಪ್ರಸ್ತುತ ದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ಅಂಗಡಿಯವರು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಅದರಂತೆ, ಇಲ್ಲೊಂದು ಬಾರ್‌ನಲ್ಲಿ ಮದ್ಯ ಸೇವನೆಗೆ ಹೋದರೆ, ಅದಕ್ಕೂ ಮೊದಲು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು ಎಂಬ ನಿಯಮವಿದೆ. ಅರೇ, ಇದೇನು ವಿಶೇಷ ಅಂತ ಯೋಚನೆ ಮಾಡ್ತಾ ಇದ್ದರೆ, ಈ ಲೇಖನವನ್ನು ಪೂರ್ಣವಾಗಿ ಓದಿ ನಿಮಗೆ ತಿಳಿಯುತ್ತದೆ.

ಜನರು ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಬಾರ್‌ಗಳಿಗೆ ಹೋಗುತ್ತಾರೆ. ಕೆಲ ಸಮಯ ಮೋಜು ಮಸ್ತಿ ಮಾಡುತ್ತಾರೆ. ಅದರಂತೆ, ಚೀನಾದ ಬಾರ್ ಒಂದು ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಮೊದಲು ನಾಡಿಮಿಡಿತ ಪರೀಕ್ಷಿಸಿ, ಬಳಿಕ ಅವರ ಆರೋಗ್ಯ ಸ್ಥಿತಿಯ ಆಧಾರದಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಾರೆ.

ADVERTISEMENT

ಚೀನಾದ ಪ್ರಮುಖ ಸಾಂಪ್ರದಾಯಿಕ ಬಾರ್‌ಗಳಲ್ಲಿ ಒಂದಾಗಿರುವ ‘ಶಾಂಘೈ ಬಾರ್ ನಿಯಾಂಗ್ ಕ್ವಿಂಗ್‘ ನಲ್ಲಿ ಸಾಂಪ್ರದಾಯಿಕ ಶೈಲಿಯ ವೈನ್ ಅನ್ನು ನೀಡಲಾಗುತ್ತದೆ. ಈ ಬಾರ್‌ನ ಪ್ರಮುಖ ವಿಶೇಷತೆ ಎಂದರೆ, ಗ್ರಾಹಕರ ಆರೋಗ್ಯ ತಪಾಸಣೆ ಮಾಡುವುದು. ಇಲ್ಲಿ ಒತ್ತಡಕ್ಕೊಳಗಾಗಿ ಮದ್ಯ ಸೇವನೆಗೆ ಬರುವ ಯುವಕ ಹಾಗೂ ಯುವತಿಯರ ಆರೋಗ್ಯವನ್ನು ಪರಿಶೀಲನೆ ಮಾಡುವ ವಿಧಾನವನ್ನು ಅನುಸರಿಕೊಂಡು ಬರಲಾಗುತ್ತಿದೆ.

ಈಗಾಗಲೇ ಚೀನಾದಾದ್ಯಂತ ಹಲವಾರು ನಗರಗಳಲ್ಲಿ ‘TCM ಬಾರ್‌ಗಳು’ ತಲೆ ಎತ್ತಿದ್ದು, ಒತ್ತಡಕ್ಕೊಳಗಾಗಿ ಕುಡಿಯಲು ಬರುವವರಿಗೆ ‘ನಿಮ್ಮ ಆರೋಗ್ಯವನ್ನು ನೀವೇ ಹಾಳು ಮಾಡಿಕೊಳ್ಳಬೇಡಿ’ ಎಂಬ ಸಂದೇಶದ ಅನ್ವಯ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಬಳಿಕ ಅವರ ಆರೋಗ್ಯ ಸಹಜ ಸ್ಥಿತಿಯಲ್ಲಿದ್ದರೆ, ಮದ್ಯಪಾನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಮಾತ್ರವಲ್ಲ, ಯುವಕರ ಆರೋಗ್ಯ ಸ್ಥಿತಿಗೆ ಹೊಂದಿಕೊಳ್ಳುವ, ಗಿಡಮೂಲಿಕೆಗಳು ಮತ್ತು ಬೇರುಗಳಿಂದ ತಯಾರಿಸಿದ ಮದ್ಯವನ್ನು ಅವರಿಗೆ ನೀಡಲಾಗುತ್ತದೆ.

ಸಮೀಕ್ಷೆಯೊಂದರ ಪ್ರಕಾರ, ಶೇ 60ಕ್ಕಿಂತ ಹೆಚ್ಚು ಯುವಜನರ ಆರೋಗ್ಯದ ಸ್ಥಿತಿ ಸರಿಯಾಗಿಲ್ಲ ಎಂದು ಸಾಬೀತಾಗಿದೆ. ಹಾಗಾಗಿ, ಈ ವಿಶೇಷ ಸಂಪ್ರದಾಯ ನಮ್ಮ ಬಾರ್‌ನಲ್ಲಿದೆ ಎಂದು ಟಿಸಿಎಂ ಬಾರ್‌ನ ಆರೋಗ್ಯ ಡಿಂಗ್ ಹೇಳಿದ್ದಾರೆ.

ಮುಂದುವರೆದು, ಚೀನೀ ಔಷಧ ಮತ್ತು ಮದ್ಯದ ಸಂಯೋಜನೆಯು ಹೊಸದಲ್ಲ, ಇದು TCM ಸಂಸ್ಥೆಯ ದೀರ್ಘ ಇತಿಹಾಸದ ಸಂಖೇತ. ಹಿಂದೆ ಇದನ್ನು ‘ಔಷಧೀಯ ವೈನ್’ ಎಂದು ಕರೆಯಲಾಗುತ್ತಿತ್ತು. ಬಾರ್‌ನ ಉದ್ದೇಶ ಚಿಕಿತ್ಸೆ ನೀಡುವುದಲ್ಲ, ಆದರೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.