ADVERTISEMENT

ಕ್ರೆಡಿಟ್‌ ಲೈನ್‌ ಆಧಾರದಲ್ಲಿ ಇಂಧನ ನೀಡಿದ ಏಕೈಕ ರಾಷ್ಟ್ರ ಭಾರತ: ಶ್ರೀಲಂಕಾ ಸಚಿವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2022, 10:30 IST
Last Updated 16 ಜುಲೈ 2022, 10:30 IST
ಕಾಂಚನ ವಿಜೆಸೇಖರ (ಚಿತ್ರ: ಟ್ವಿಟರ್‌ @kanchana_wij)
ಕಾಂಚನ ವಿಜೆಸೇಖರ (ಚಿತ್ರ: ಟ್ವಿಟರ್‌ @kanchana_wij)   

ಕೊಲಂಬೊ: ಹಣ ಪಾವತಿಸುವ ಬಗ್ಗೆ ಬ್ಯಾಂಕ್‌ ಖಾತರಿ (ಕ್ರೆಡಿಟ್‌ ಲೈನ್) ಆಧಾರದಲ್ಲಿ ಈ ವರೆಗೆ ನಮಗೆ ಇಂಧನ ಪೂರೈಸಿದ ಏಕೈಕ ರಾಷ್ಟ್ರ ಭಾರತ ಮಾತ್ರ ಎಂದು ಶ್ರೀಲಂಕಾದ ಇಂಧನ ಸಚಿವ ಕಾಂಚನ ವಿಜೆಸೇಖರ ಶನಿವಾರ ಹೇಳಿದ್ದಾರೆ.

'ನಾವು ವಿವಿಧ ದೇಶಗಳಿಗೆ (ಇಂಧನಕ್ಕಾಗಿ) ವಿನಂತಿ ಮಾಡಿಕೊಂಡಿದ್ದೇವೆ. ಹೀಗಾಗಿ, ನಮಗೆ ಸಹಾಯ ಮಾಡಲು ಮುಂದೆ ಬರುವ ಯಾವುದೇ ದೇಶವನ್ನು ನಾವು ಪ್ರಶಂಸಿಸುತ್ತೇವೆ. ಕ್ರೆಡಿಟ್‌ ಲೈನ್ ಆಧಾರದಲ್ಲಿ ಈ ವರೆಗೆ ನಮಗೆ ಇಂಧನ ಪೂರೈಸಿದ ಏಕೈಕ ರಾಷ್ಟ್ರ ಭಾರತ ಮಾತ್ರ' ಎಂದು ಕಾಂಚನ ವಿಜೆಸೇಖರ ತಿಳಿಸಿದ್ದಾರೆ.

‘ರಷ್ಯಾ ಸರ್ಕಾರದೊಂದಿಗೂ ನಾವು ಚರ್ಚೆ ನಡೆಸುತ್ತಿದ್ದೇವೆ. ಆರಂಭಿಕ ಸಭೆಗಳು ರಷ್ಯಾದಲ್ಲಿ ನಡೆದಿವೆ. ನಾವು ನಮ್ಮ ಅಗತ್ಯವನ್ನು ತಿಳಿಸಿದ್ದೇವೆ. ಇನ್ನೂ ಮಾತುಕತೆಗಳು ನಡೆಯುತ್ತಿವೆ. ಯಾವ ರೀತಿಯ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂಬುದನ್ನು ತಿಳಿಯಲು ನಾವೂ ಕಾಯುತ್ತಿದ್ದೇವೆ‘ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.