ADVERTISEMENT

Israel-Gaza Conflict: ಟ್ರಂಪ್‌–ನೆತನ್ಯಾಹು ಮಾತುಕತೆ ಇಂದು

ಏಜೆನ್ಸೀಸ್
Published 30 ಡಿಸೆಂಬರ್ 2025, 3:08 IST
Last Updated 30 ಡಿಸೆಂಬರ್ 2025, 3:08 IST
ನೆತನ್ಯಾಹು ಮತ್ತು ಡೊನಾಲ್ಡ್‌ ಟ್ರಂಪ್‌
ನೆತನ್ಯಾಹು ಮತ್ತು ಡೊನಾಲ್ಡ್‌ ಟ್ರಂಪ್‌   

ಪಾಮ್‌ ಬೀಚ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಸೋಮವಾರ ಮಾತುಕತೆ ನಡೆಸಲಿದ್ದಾರೆ.

ಟ್ರಂಪ್‌ ಅವರು ಫ್ಲಾರಿಡಾದ ಮಾರ್‌–ಎ–ಲಾಗೊ ಎಸ್ಟೇಟ್‌ನಲ್ಲಿ ಮುಖಾಮುಖಿ ಭೇಟಿಯಾಗಿ, ಇಸ್ರೇಲ್‌–ಗಾಜಾ ನಡುವಣ ಸಂಘರ್ಷದ ಅಂತ್ಯಕ್ಕೆ ಶಾಂತಿ ಮಾತುಕತೆ ಪ್ರಕ್ರಿಯೆಯನ್ನು ವೇಗಗೊಳಿಸುವ ಸಂಬಂಧ ನೆತನ್ಯಾಹು ಅವರ ಮೇಲೆ ಪ್ರಭಾವ ಬೀರಲಿದ್ದಾರೆ.

ಇದಕ್ಕೂ ಮುನ್ನ ನೆತನ್ಯಾಹು ಅವರು ಅಮೆರಿಕದ ರಕ್ಷಣಾ ಸಚಿವ ಮತ್ತು ವಿದೇಶಾಂಗ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ.

ADVERTISEMENT

ಟ್ರಂಪ್‌ ಅವರ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌–ಹಮಾಸ್‌ ನಡುವಣ ಶಾಂತಿ ಒಪ್ಪಂದ ಮಾತುಕತೆ ನಡೆಯುತ್ತಿದೆ. ಇತ್ತೀಚೆಗೆ ಮಾತುಕತೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಉಭಯ ತಂಡಗಳು ಶಾಂತಿ ಮಾತುಕತೆಯ ನಿಯಮಗಳ ಉಲ್ಲಂಘನೆಯಾಗುತ್ತಿದೆ ಎಂದು ಪರಸ್ಪರ ಆರೋಪಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.