ಗಾಜಾ
(ಪ್ರಾತಿನಿಧಿಕ ಚಿತ್ರ)
ಟೆಲ್ ಅವಿವ್: ಗಾಜಾದ ಮೇಲೆ ಕೂಡಲೇ ತೀವ್ರ ದಾಳಿ ನಡೆಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಇಸ್ರೇಲ್ ಪ್ರಧಾನಿಯ ಕಾರ್ಯಾಲಯ ತಿಳಿಸಿದೆ. ಭದ್ರತಾ ಪರಿಶೀಲನೆಯ ಬಳಿಕ ಗಾಜಾ ಪಟ್ಟಿಯ ಮೇಲೆ ಪ್ರಬಲ ದಾಳಿ ನಡೆಸುವಂತೆ ಸೇನೆಗೆ ಆದೇಶಿಸಲಾಗಿದೆ ಎಂದು ಹೇಳಿದೆ.
ಗಾಜಾದಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಪಡೆಗಳ ಮೇಲೆ ಹಮಾಸ್ ದಾಳಿ ನಡೆಸಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿಕೊಂಡ ಬೆನ್ನಲ್ಲೇ ನೆತನ್ಯಾಹು ಈ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಹಾಗೂ ಹಮಾಸ್ ಮಧ್ಯೆ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು. ಆದರೆ ಈ ಹಠಾತ್ ಬೆಳವಣಿಗೆಯಿಂದ ಕದನ ವಿರಾಮ ಒಪ್ಪಂದ ಮುರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.