ಲೆಬನಾನ್‌ನ ಬೈರೂತ್‌ನಲ್ಲಿರುವ ಈಜಿಫ್ಟ್ ರಾಯಭಾರಿ ಕಚೇರಿಯಯ ಮುಂದೆ ಬುಧವಾರ ಮಹಿಳೆಯೊಬ್ಬರು ಗಾಜಾದ ಜನರ ಪರವಾಗಿ ಪ್ರತಿಭಟನೆ ನಡೆಸಿದರು.
-ಪಿಟಿಐ ಚಿತ್ರ
ದೀರ್ ಅಲ್–ಬಲಾಹ್ (ಗಾಜಾ ಪಟ್ಟಿ): ಮಂಗಳವಾರ ತಡರಾತ್ರಿ ಮತ್ತು ಬುಧವಾರ ಮುಂಜಾನೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಗಾಜಾದ ಕನಿಷ್ಠ 21 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಅರ್ಧಕ್ಕಿಂತ ಹೆಚ್ಚು ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಮೇ ತಿಂಗಳ ನಂತರ, ಗಾಜಾದಲ್ಲಿ ಆಹಾರ ಪಡೆಯುವ ಪ್ರಯತ್ನದಲ್ಲಿದ್ದ 1000ಕ್ಕೂ ಹೆಚ್ಚು ಜನರನ್ನು ಇಸ್ರೇಲಿ ಪಡೆಗಳು ಕೊಂದಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಮಂಗಳವಾರ ಹೇಳಿದೆ. ಅಮೆರಿಕದ ಗುತ್ತಿದಾರರು ನೆರವು ನೀಡುತ್ತಿರುವ ಪ್ರದೇಶಗಳ ಬಳಿಯೇ ಹೆಚ್ಚಿನ ಹತ್ಯೆಗಳು ನಡೆದಿವೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.