ADVERTISEMENT

ಅಬೆ ಹತ್ಯೆಯ ಭದ್ರತಾ ಲೋಪದ ಹೊಣೆ ಹೊತ್ತು ಜಪಾನ್‌ ಪೊಲೀಸ್‌ ಮುಖ್ಯಸ್ಥ ರಾಜೀನಾಮೆ

ಏಜೆನ್ಸೀಸ್
Published 25 ಆಗಸ್ಟ್ 2022, 11:01 IST
Last Updated 25 ಆಗಸ್ಟ್ 2022, 11:01 IST
ಇತಾರು ನಕಮುರಾ
ಇತಾರು ನಕಮುರಾ   

ಟೋಕಿಯೊ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಪ್ರಚಾರ ಭಾಷಣದ ವೇಳೆ ಗುಂಡೇಟಿಗೆ ಬಲಿಯಾಗಲು ಕಾರಣವಾಗಿರುವ ಭದ್ರತಾ ಲೋಪದ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಪೊಲೀಸ್‌ ಮುಖ್ಯಸ್ಥ ಇತಾರು ನಕಮುರಾ ಗುರುವಾರ ಹೇಳಿದ್ದಾರೆ.

ಶಿಂಜೊ ಅವರಿಗೆ ನೀಡಿದ್ದ ಭದ್ರತೆಯಲ್ಲಿನ ನ್ಯೂನತೆಗಳನ್ನು ಉಲ್ಲೇಖಿಸಿ ಪೊಲೀಸ್‌ ಇಲಾಖೆಯು ವರದಿ ಬಿಡುಗಡೆ ಮಾಡಿದ ಬಳಿಕ ಇತಾರು ಅವರು ಈ ತೀರ್ಮಾನ ಪ್ರಕಟಿಸಿದ್ದಾರೆ.

ADVERTISEMENT

‘ಮಾಜಿ ಪ್ರಧಾನಿ ಅವರ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಾಜೀನಾಮೆ ಸಲ್ಲಿಸಿದ್ದೇನೆ. ಗಣ್ಯರಿಗೆ ನೀಡುವ ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಮತ್ತು ಇಂತಹ ಘಟನೆಗಳು ಮರುಕಳಿಸಬಾರದು’ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಇತಾರು ಅವರ ರಾಜೀನಾಮೆ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.