ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್ ಪಾರ್ಕ್‌ನಲ್ಲಿ ಸಿಎಂ ಮಮತಾ ಜಾಗಿಂಗ್
ಚಿತ್ರಕೃಪೆ: AITCofficial
ಕೋಲ್ಕತ್ತ/ ಲಂಡನ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಂಡನ್‌ನ ಪಾರ್ಕ್‌ವೊಂದರಲ್ಲಿ ಸೀರೆಯುಟ್ಟು, ಚಪ್ಪಲಿ ಧರಿಸಿ ವಾಕಿಂಗ್ ಮಾಡಿದ್ದಾರೆ.
ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಮಮತಾ ಬ್ರಿಟನ್‌ಗೆ ಭಾನುವಾರ ತೆರಳಿದ್ದಾರೆ. ಮಂಗಳವಾರ ಬೆಳಿಗ್ಗೆ ಲಂಡನ್‌ನ ಜನಪ್ರಿಯ ಹೈಡ್ ಪಾರ್ಕ್‌ನಲ್ಲಿ ಬಿಳಿ ಬಣ್ಣದ ಸೀರೆಯುಟ್ಟು, ಬಿಳಿಯ ಚಪ್ಪಲಿ ಧರಿಸಿ ವಾಕಿಂಗ್, ಜಾಗಿಂಗ್ ಮಾಡಿದ್ದಾರೆ. ಮಮತಾ ಅವರ ನಿಯೋಗದ ಸದಸ್ಯರೂ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್ ವಿಡಿಯೊ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಮಮತಾ ಜಾಗಿಂಗ್ ಮಾಡುವ, ಹಿಮ್ಮುಖವಾಗಿ ನಡೆಯುವ ದೃಶ್ಯಗಳಿವೆ.
ಮಮತಾ ಅವರು ಅಂತರರಾಷ್ಟ್ರೀಯ ಭೇಟಿ ವೇಳೆ ಸೀರೆಯುಟ್ಟು ಜಾಗಿಂಗ್ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ 2023ರಲ್ಲಿ ಸ್ಪೇನ್‌ಗೆ ತೆರಳಿದ್ದ ವೇಳೆ ಸೀರೆಯುಟ್ಟು, ಚಪ್ಪಲಿ ಧರಿಸಿ ಜಾಗಿಂಗ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.