ADVERTISEMENT

ಧಾರಾಕಾರ ಮಳೆಗೆ ಪಾಕಿಸ್ತಾನ ತತ್ತರ: ಜೂನ್ 26ರಿಂದ 266 ಸಾವು, 628 ಜನರಿಗೆ ಗಾಯ

ಧಾರಾಕಾರ ಮಳೆಗೆ ಪಾಕಿಸ್ತಾನ ತತ್ತರ: ಜೂನ್ 26ರಿಂದ 266 ಸಾವು, 628 ಜನರಿಗೆ ಗಾಯ

ಪಿಟಿಐ
Published 25 ಜುಲೈ 2025, 10:08 IST
Last Updated 25 ಜುಲೈ 2025, 10:08 IST
<div class="paragraphs"><p>ಭಾರಿ ಮಳೆಯಿಂದಾಗಿ ಕರಾಚಿಯ ರಸ್ತೆ ಜಲಾವೃತವಾಗಿರುವುದು</p></div>

ಭಾರಿ ಮಳೆಯಿಂದಾಗಿ ಕರಾಚಿಯ ರಸ್ತೆ ಜಲಾವೃತವಾಗಿರುವುದು

   

ರಾಯಿಟರ್ಸ್‌ ಚಿತ್ರ

ಪೆಶಾವರ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಪಾಕಿಸ್ತಾನ ತತ್ತರಿಸಿದೆ. ದೇಶದಲ್ಲಿ ಜೂನ್‌ 26ರಿಂದ ಈಚೆಗೆ ಬರೋಬ್ಬರಿ 266 ಮಂದಿ ಮೃತಪಟ್ಟಿದ್ದಾರೆ. 628 ಜನರು ಗಾಯಗೊಂಡಿರುವುದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಿ (NDMA) ಶುಕ್ರವಾರ ತಿಳಿಸಿದೆ.

ADVERTISEMENT

ಇದುವರೆಗೆ ಮೃತಪಟ್ಟವರಲ್ಲಿ 126 ಮಕ್ಕಳು, 94 ಪುರುಷರು ಹಾಗೂ 46 ಮಹಿಳೆಯರು ಎಂದು ಮಾಹಿತಿ ಬಿಡುಗಡೆ ಮಾಡಿರುವ NDMA, ಕಳೆದ 24 ಗಂಟೆಗಳಲ್ಲಿ 14 ಮಂದಿ ಮೃತಪಟ್ಟು, 17 ಜನರು ಗಾಯಗೊಂಡಿದ್ದಾರೆ ಎಂದೂ ಉಲ್ಲೇಖಿಸಿದೆ.

ಪಂಜಾಬ್‌ ಪ್ರಾಂತ್ಯದಲ್ಲಿ ಅತಿಹೆಚ್ಚು ಸಾವು–ನೋವು ಸಂಭವಿಸಿದೆ. ಇಲ್ಲಿ, 144 ಮಂದಿ ಮೃತಪಟ್ಟಿದ್ದರೆ, 488 ಜನರು ಗಾಯಗೊಂಡಿದ್ದಾರೆ. ಉಳಿದಂತೆ ಖೈಬರ್‌ ಪಖ್ತುಂಖ್ವಾದಲ್ಲಿ 63, ಸಿಂಧ್‌ನಲ್ಲಿ 25, ಬಲೂಚಿಸ್ತಾನ್‌ನಲ್ಲಿ 16, ಇಸ್ಲಾಮಾಬಾದ್‌ನಲ್ಲಿ ಎಂಟು ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 10 ಮಂದಿ ಮೃತಪಟ್ಟಿದ್ದಾರೆ. ಖೈಬರ್‌ ಪಖ್ತುಂಖ್ವಾದಲ್ಲಿ 69, ಸಿಂಧ್‌ನಲ್ಲಿ 40, ಪಿಒಕೆಯಲ್ಲಿ 18, ಬಲೂಚಿಸ್ತಾನ್‌ನಲ್ಲಿ 4 ಹಾಗೂ ಇಸ್ಲಾಮಾಬಾದ್‌ನಲ್ಲಿ ಮೂವರು ಗಾಯಗೊಂಡಿದ್ದಾರೆ.

ಭಾರಿ ಮಳೆಯಿಂದಾಗಿ, ಮೂಲಸೌಕರ್ಯ, ಅಪಾರ ಆಸ್ತಿ ಹಾನಿಯಾಗಿದೆ. ಕಳೆದ 24 ಗಂಟೆಗಳಲ್ಲಿ 246 ಮನೆಗಳಿಗೆ ಹಾನಿಯಾಗಿದೆ. 38 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಮುಂಗಾರುಮಳೆ ಆರಂಭವಾದಾಗಿನಿಂದ ಸುಮಾರು 1,250 ಮನೆಗಳಿಗೆ ಹಾನಿಯಾಗಿದ್ದು, 366 ಜಾನುವಾರುಗಳು ಮೃತಪಟ್ಟಿವೆ ಎಂಬುದು NDMA ವರದಿಯಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.