
ನಿಕೊಲಸ್ ಮಡೂರೊ
ಚಿತ್ರ ಕೃಪೆ: @RapidResponse47
ನ್ಯೂಯಾರ್ಕ್: ವೆನಿಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಅಮೆರಿಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮನಿಸ್ಟ್ರೇಷನ್ (ಡಿಇಎ) ಅಧಿಕಾರಿಗಳು, ನ್ಯೂಯಾರ್ಕ್‌ನಲ್ಲಿರುವ ಏಜೆನ್ಸಿಯ ಪ್ರಧಾನ ಕಚೇರಿಯೊಳಗೆ ಕರೆದೊಯ್ಯುತ್ತಿರುವ ವಿಡಿಯೊವೊಂದು ಹೊರಬಂದಿದೆ.
ಶ್ವೇತಭವನದ ಅಧಿಕೃತ ರಾಪಿಡ್ ರೆಸ್ಪಾನ್ಸ್ ಖಾತೆಯಲ್ಲಿ ‘ಅಪರಾಧಿ ನಡೆದಾಗ’ ಎಂಬ ಅಡಿಬರಹದೊಂದಿಗೆ ವಿಡಿಯೊ ಪೋಸ್ಟ್ ಮಾಡಿದೆ.
ಈ ವಿಡಿಯೊದಲ್ಲಿ ಮಡೂರೊ ಅವರನ್ನು ಭದ್ರತಾ ಸಿಬ್ಬಂದಿ ಹಿಡಿದುಕೊಂಡು ಸಾಗುತ್ತಿದ್ದಾರೆ. ಈ ವೇಳೆ ಮಡೂರೊ ‘ಹ್ಯಾಪಿ ನ್ಯೂ ಇಯರ್’ ಎಂಬ ಸಂದೇಶ ನೀಡುತ್ತಾರೆ.
ಮಗದೊಂದು ವಿಡಿಯೊದಲ್ಲಿ ಮಡೂರೊ ಅವರನ್ನು ನ್ಯೂಯಾರ್ಕ್ ಸಿಟಿಗೆ ಕರೆತರುವ ದೃಶ್ಯ ಇದೆ.
ಮಡೂರೊ ಅವರನ್ನು ‘ಹೆಲ್ ಆನ್ ಅರ್ಥ್’ ಎಂದೇ ಕರೆಯಲ್ಪಡುವ ನ್ಯೂಯಾರ್ಕ್‌ನ ಜೈಲಿಗೆ ಅಟ್ಟುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ವೆನಿಜುವೆಲಾದ ರಾಜಧಾನಿ ಕರಾಕಸ್ ಮೇಲೆ ಭಾರಿ ಪ್ರಮಾಣದ ವಾಯುದಾಳಿ ನಡೆಸಿದ್ದ ಅಮೆರಿಕ, ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಸೆರೆ ಹಿಡಿದಿತ್ತು. ಮಾದಕವಸ್ತು ಭಯೋತ್ಪಾದನೆ ಸೇರಿದಂತೆ ಹಲವು ಪ್ರಕರಣಗಳನ್ನು ಹೊರಿಸಲಾಗಿದ್ದು, ನ್ಯೂರ್ಯಾರ್ಕ್‌ನಲ್ಲಿ ವಿಚಾರಣೆಗೆ ಒಳಪಡಿಸಿ ದೋಷಾರೋಪ ನಿಗದಿ ಮಾಡುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.