
ಖಂಡಾಂತರ ಕ್ಷಿಪಣಿ
(ಐಸ್ಟೋಕ್ ಸಂಗ್ರಹ ಚಿತ್ರ)
ಸೋಲ್: ಉತ್ತರ ಕೊರಿಯಾವು ತನ್ನ ಪೂರ್ವದ ಕಡೆಗೆ ಖಂಡಾಂತರ ಕ್ಷಿಪಣಿ ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಸೇನೆ ಬುಧವಾರ ಹೇಳಿದೆ. ಆದರೆ, ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.
ಇದಕ್ಕೂ ಮೊದಲು ಕ್ಷಿಪಣಿ ಉಡಾವಣೆ ಕುರಿತು ದಕ್ಷಿಣ ಕೊರಿಯಾದ ಸುದ್ದಿಸಂಸ್ಥೆ ʼಯೋನ್‌ಹಾಪ್ʼ ವರದಿ ಮಾಡಿತ್ತು. ಉತ್ತರ ಕೊರಿಯಾದ ಪೂರ್ವ ಕರಾವಳಿಯತ್ತ ಕ್ಷಿಪಣಿ ಉಡಾಯಿಸಲಾಗಿದೆ ಎಂದು ಉಲ್ಲೇಖಿಸಿತ್ತು.
ಉತ್ತರ ಕೊರಿಯಾ ಕೊನೆಯ ಸಲ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ್ದು ಮೇ 8ರಂದು. ಆಗ ಪೂರ್ವ ಕರಾವಳಿಯತ್ತ ಅಲ್ಪ ಶ್ರೇಣಿಯ ಕ್ಷಿಪಣಿಗಳನ್ನು ಹಾರಿಸಿತ್ತು.
ಖಂಡಾಂತರ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸದಂತೆ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳು ಹೇರಿರುವ ನಿಷೇಧವನ್ನು ತಿರಸ್ಕರಿಸಿರುವ ಉತ್ತರ ಕೊರಿಯಾ, ಪ್ರಯೋಗಗಳನ್ನು ಮುಂದುವರಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಸೇರಿದಂತೆ ಹಲವು ನಾಯಕರು ʼಏಷ್ಯಾ-ಪೆಸಿಫಿಕ್ ಆರ್ಥಿಕ ವೇದಿಕೆʼಯಲ್ಲಿ ಪಾಲ್ಗೊಳ್ಳಲು ಮುಂದಿನ ವಾರ ದಕ್ಷಿಣ ಕೊರಿಯಾಗೆ ಬರಲಿದ್ದಾರೆ. ಇದೇ ಹೊತ್ತಿನಲ್ಲಿ ಖಂಡಾಂತರ ಕ್ಷಿಪಣಿ ಉಡಾಯಿಸಿರುವುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.