
ವಾಷಿಂಗ್ಟನ್: ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಅಮೆರಿಕದ ರಕ್ಷಣಾ ದಳ ಪೆಂಟಗನ್ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಕರೆದಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪೆಂಟಗನ್, ಇರಾನ್ ಮೇಲಿನ ದಾಳಿಯನ್ನು ಅಮೆರಿಕದ ಪ್ರಮುಖ ಮಿಲಿಟರಿ ಕಾರ್ಯಾಚರಣೆ ಎಂದು ಘೋಷಿಸಿದೆ.
ಇದೇ ರೀತಿ ಕಳೆದ ವರ್ಷ ಇರಾನ್‌ನ ಪರಮಾಣು ಕೇಂದ್ರದ ಮೇಲಿನ ದಾಳಿಯನ್ನು ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಎಂದು, ಈ ವರ್ಷದ ಆರಂಭದಲ್ಲಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಪಡಿಸಿಕೊಳ್ಳಲು ನಡೆಸಿದ ದಾಳಿಯನ್ನು ‘ಆಪರೇಷನ್ ಅಬ್ಸೊಲ್ಯೂಟ್ ರೆಸಲ್ಯೂವ್’ ಎಂದು ಪೆಂಟಗನ್ ಹೆಸರಿಸಿತ್ತು.
ಪರಮಾಣು ಒಪ್ಪಂದ ಮಾತುಕತೆಗೆ ಇರಾನ್ ಸ್ಪಂದಿಸಿದ ಕಾರಣ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಇಂದು ದಾಳಿ ನಡೆಸಿವೆ. ಇರಾನ್ ಕೂಡ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಿದೆ.
ಯುದ್ಧ ಭೀತಿ ಹಿನ್ನೆಲೆ ಇಸ್ರೇಲ್‌ನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.