ಇಶಾಕ್ ದಾರ್
–ರಾಯಿಟರ್ಸ್ ಚಿತ್ರ
ಇಸ್ಲಾಮಾಬಾದ್: ಪಾಕಿಸ್ತಾನದ ಉಪ ಪ್ರಧಾನಿ, ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಸೆನೆಟ್‌ನಲ್ಲಿ ದೇಶದ ವಾಯುಪಡೆಯನ್ನು ಹೊಗಳಲು ಬ್ರಿಟನ್ ಮೂಲದ ದಿನಪತ್ರಿಕೆಯೊಂದರ ನಕಲಿ ವರದಿಯನ್ನು ಬಳಸಿರುವುದು ಬಹಿರಂಗಗೊಂಡಿದೆ.
ವೈರಲ್ ಆಗಿರುವ ನಕಲಿ ವರದಿಯನ್ನು ಉಲ್ಲೇಖಿಸಿ ಸೆನೆಟ್‌ನಲ್ಲಿ ಮಾತನಾಡಿದ್ದ ಇಶಾಕ್ ದಾರ್, ಪಾಕಿಸ್ತಾನದ ವಾಯುಪಡೆಯನ್ನು ಹೊಗಳಿ ‘ದಿ ಡೈಲಿ ಟೆಲಿಗ್ರಾಫ್’ ವರದಿ ಮಾಡಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಡಾನ್ ಪತ್ರಿಕೆಯು ದಾರ್ ಅವರ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಿದ್ದು, ಇದು ನಕಲಿ ವರದಿ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ದೃಢಪಡಿಸಿದೆ.
ಈಚೆಗೆ ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆ ನಡುವೆಯೇ ಬ್ರಿಟನ್ ಮೂಲದ ‘ದಿ ಡೈಲಿ ಟೆಲಿಗ್ರಾಫ್’ ಪತ್ರಿಕೆಯ ಮುಖಪುಟ ಹೋಲಿಕೆಯಾಗುವಂತಹ ಫೋಟೊವನ್ನು ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವರದಿಗಳನ್ನು ಹಂಚಿಕೊಳ್ಳಲಾಗಿದೆ. ಆದರೆ, ಅಂತಹ ಯಾವುದೇ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ ಮತ್ತು ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ಗಳು ನಕಲಿ ಎಂದು ಡಾನ್ ಉಲ್ಲೇಖಿಸಿದೆ.
ಮೇ 10ರಂದು ನ್ಯಾಯಮೂರ್ತಿ ಖಾದಿಜಾ ಸಿದ್ದಿಕಿ ಎಂಬುವವರು ಬ್ರಿಟನ್ ದಿನಪತ್ರಿಕೆ ಹೆಸರಿನಲ್ಲಿ ನಕಲಿ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಅನ್ನು ಮೇ 11ರಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮಾಹಿತಿ ಸಂಯೋಜಕರಾದ ಇಖ್ತಿಯಾರ್ ವಾಲಿ ಖಾನ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.