ADVERTISEMENT

1.35 ಕೋಟಿ ಮಕ್ಕಳಿಗೆ ಪೋಲಿಯೊ ಲಸಿಕೆ; ಅಭಿಯಾನ ಆರಂಭಿಸಿದ ಪಾಕಿಸ್ತಾನ

ಐಎಎನ್ಎಸ್
Published 28 ನವೆಂಬರ್ 2022, 1:34 IST
Last Updated 28 ನವೆಂಬರ್ 2022, 1:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್:ದೇಶದ 36 ಜಿಲ್ಲೆಗಳಲ್ಲಿನ1.35 ಕೋಟಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಸಲುವಾಗಿಪಾಕಿಸ್ತಾನ ಆರೋಗ್ಯ ಇಲಾಖೆಯು ಈ ವರ್ಷದಲ್ಲಿ ಮೂರನೇ ಬಾರಿಗೆ ಲಸಿಕೆ ಅಭಿಯಾನವನ್ನು ಇಂದಿನಿಂದ (ಸೋಮವಾರದಿಂದ) ಆರಂಭಿಸಲಿದೆ.

ಪೂರ್ವ ಪಂಜಾಬ್ ಪ್ರಾಂತ್ಯದ ಒಂಬತ್ತು ಜಿಲ್ಲೆಗಳು, ದಕ್ಷಿಣ ಸಿಂಧ್‌ನ ಎಂಟು ಜಿಲ್ಲೆಗಳು ಮತ್ತು ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಆರು ಜಿಲ್ಲೆಗಳುಲಸಿಕೆಅಭಿಯಾನದದ ವ್ಯಾಪ್ತಿಗೆ ಬರಲಿವೆ ಎಂದು ಸಚಿವಾಲಯ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ.

ಪಾಕಿಸ್ತಾನದಲ್ಲಿ ಈ ವರ್ಷ (2022ರಲ್ಲಿ) ಒಟ್ಟು 20 ಪೋಲಿಯೊ ಪ್ರಕರಣಗಳು ಪತ್ತೆಯಾಗಿವೆ.ವರದಿಯಾಗಿರುವ ಎಲ್ಲ ಪ್ರಕರಣಗಳೂಖೈಬರ್‌ ಪಖ್ತುಂಖ್ವಾಪ್ರಾಂತ್ಯದಲ್ಲಿವೆ. ದೇಶದ ಇತರ ಭಾಗಗಳಲ್ಲಿಯೂ ಪೋಲಿಯೊ ವೈರಸ್‌ ಪತ್ತೆಯಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೇ ವರದಿ ಮಾಡಿದೆ.

ADVERTISEMENT

ಸಚಿವಾಲಯದ ಮಾಹಿತಿ ಪ್ರಕಾರ ತರಬೇತಿ ಪಡೆದ ಹಾಗೂ ಆರೋಗ್ಯ ಕಾರ್ಯಕರ್ತರು ಸೇರಿ1 ಲಕ್ಷಕ್ಕೂ ಹೆಚ್ಚು ಮಂದಿಲಸಿಕೆ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.