ADVERTISEMENT

Russia Ukraine War | ಉಕ್ರೇನ್‌ನ ಎರಡು ಹಳ್ಳಿ ವಶ: ರಷ್ಯಾ

ಏಜೆನ್ಸೀಸ್
Published 23 ಆಗಸ್ಟ್ 2025, 13:53 IST
Last Updated 23 ಆಗಸ್ಟ್ 2025, 13:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಾಸ್ಕೊ: ರಷ್ಯಾ ಹಾಗೂ ಉಕ್ರೇನ್‌ ಸಂಘರ್ಷದ ಶಮನಕ್ಕೆ ಜಾಗತಿಕ ನಾಯಕರು ಮಧ್ಯಸ್ಥಿಕೆ ವಹಿಸಲು ಹೆಣಗಾಡುತ್ತಿರುವ ಹೊತ್ತಿನಲ್ಲೇ, ಪೂರ್ವ ಉಕ್ರೇನ್‌ನ ಡೊನೆಟ್‌ಸ್ಕ್‌  ಪ್ರದೇಶದಲ್ಲಿರುವ ಸ್ರೆಡ್ನಿಯೆ ಹಾಗೂ ಕ್ಲೆಬೆನ್‌–ಬೈಕ್‌ ಗ್ರಾಮಗಳನ್ನು ರಷ್ಯಾ ಪಡೆಗಳು ವಶಕ್ಕೆ ಪಡೆದಿವೆ.

ಕ್ಲೆಬೆನ್‌–ಬೈಕ್‌ ಗ್ರಾಮವನ್ನು ವಶಪಡಿಸಿಕೊಳ್ಳುವುದರಿಂದ, ರಷ್ಯಾ ಪಡೆಗಳು ಕೋಸ್ಟಿಯಾಂಟಿನಿವ್ಕಾ ಸನಿಹಕ್ಕೆ ಹೋದಂತಾಗಿದೆ. ಈ ಪಟ್ಟಣವು ಉಕ್ರೇನ್‌ನ ಪ್ರಮುಖ ಸರಕು ಸಾಗಣೆಯ ಮಾರ್ಗದಲ್ಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.