ADVERTISEMENT

ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಅಮೆರಿಕ ತುರ್ತು ಸಭೆ

ಉಕ್ರೇನ್ ಮೇಲೆ ರಷ್ಯಾ ಹಾರಿಸಿದ್ದ ಕ್ಷಿಪಣಿ ಪೋಲೆಂಡ್‌ನಲ್ಲಿ ಇಬ್ಬರ ಸಾವಿಗೆ ಕಾರಣ

ಏಜೆನ್ಸೀಸ್
Published 16 ನವೆಂಬರ್ 2022, 3:02 IST
Last Updated 16 ನವೆಂಬರ್ 2022, 3:02 IST
   

ವಾಷಿಂಗ್ಟನ್: ಉಕ್ರೇನ್‌ನ ವಿದ್ಯುತ್ ಮತ್ತು ಇಂಧನ ಉತ್ಪಾದನಾ ಕೇಂದ್ರಗಳನ್ನು ಗುರಿಯಾಗಿಸಿ ರಷ್ಯಾ ನಡೆಸಿರುವ ಕ್ಷಿಪಣಿ, ಪೋಲೆಂಡ್‌ನಲ್ಲಿ ಪತನಗೊಂಡು ಇಬ್ಬರ ಸಾವಿಗೆ ಕಾರಣವಾಗಿದೆ. ಅದರ ಬೆನ್ನಲ್ಲೇ ಜೋ ಬೈಡನ್ ಸರ್ಕಾರ, ಇಂಡೋನೇಷ್ಯಾದಲ್ಲಿ ತುರ್ತು ಸಭೆ ನಡೆಸಿದೆ.

ನ್ಯಾಟೊ ಸದಸ್ಯ ರಾಷ್ಟ್ರ ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ವಿದ್ಯಮಾನಗಳಿಗೆ ಕಾರಣವಾಗಿದೆ.

ಇಬ್ಬರು ನಾಗರಿಕರ ಸಾವಿಗೆ ಪೋಲೆಂಡ್ ತೀವ್ರ ಸಂತಾಪ ಸೂಚಿಸಿದೆ. ಪೋಲೆಂಡ್ ಅಧ್ಯಕ್ಷ ಅಂಡ್ರೇಜ್ ದುದಾ ಬುಧವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ADVERTISEMENT

ಅಮೆರಿಕದ ಪೂರ್ಣ ಬೆಂಬಲದೊಂದಿಗೆ, ಪೋಲೆಂಡ್ ಸಹಕಾರದಲ್ಲಿ ಈ ಪ್ರಕರಣದ ತನಿಖೆ ನಡೆಯಲಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.