ADVERTISEMENT

ಪ್ರತೀಕಾರದ ನಿರ್ಬಂಧಗಳನ್ನು ಸಿದ್ಧಪಡಿಸಲಾಗಿದೆ: ರಷ್ಯಾ

ರಾಯಿಟರ್ಸ್
Published 25 ಫೆಬ್ರುವರಿ 2022, 11:30 IST
Last Updated 25 ಫೆಬ್ರುವರಿ 2022, 11:30 IST
ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ – ಇನ್‌ಸ್ಟಾಗ್ರಾಂ ಚಿತ್ರ
ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ – ಇನ್‌ಸ್ಟಾಗ್ರಾಂ ಚಿತ್ರ   

ಮಾಸ್ಕೋ: ಪಾಶ್ಚಾತ್ಯ ದೇಶಗಳ ದೌರ್ಬಲ್ಯಗಳೇನೆಂಬುದು ನಮಗೆ ತಿಳಿದಿದೆ. ಪ್ರತೀಕಾರದ ನಿರ್ಬಂಧಗಳನ್ನು ಸಿದ್ಧ‍ಪಡಿಸಲಾಗಿದೆ ಎಂದು ರಷ್ಯಾದ ಮೇಲ್ಮನೆ ಸ್ಪೀಕರ್ ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ ಹೇಳಿರುವುದಾಗಿ ಅಲ್ಲಿನ ‘ಟಿಎಎಸ್‌ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಮ್ಯಾಟ್ವಿಯೆಂಕೊ ಅವರು ರಷ್ಯಾದ ಭದ್ರತಾ ಮಂಡಳಿಯ ಸದಸ್ಯರೂ ಆಗಿದ್ದಾರೆ. ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಎರಡು ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆ ಮಾಡುವ ಕಾರ್ಯಾಚರಣೆಗೆ ಸಂಬಂಧಿಸಿದ ಭದ್ರತಾ ಮಂಡಳಿ ಸಭೆಯಲ್ಲಿಯೂ ಅವರು ಭಾಗವಹಿಸಿದ್ದರು.

ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಬೆನ್ನಲ್ಲೇ ರಷ್ಯಾ ಮೇಲೆ ಅಮೆರಿಕ ಮತ್ತು ಯುರೋಪ್ ದೇಶಗಳು ಕಠಿಣ ನಿರ್ಬಂಧಗಳನ್ನು ವಿಧಿಸಿವೆ. ಇದಕ್ಕೆ ಪ್ರತಿಯಾಗಿ ಇದೀಗ ಆ ದೇಶಗಳ ಮೇಲೂ ನಿರ್ಬಂಧ ವಿಧಿಸಲು ರಷ್ಯಾ ಮುಂದಾಗಿದೆ ಎನ್ನಲಾಗಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.