ADVERTISEMENT

ಬಿಕ್ಕಟ್ಟು ಶಮನಕ್ಕೆ ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳಿ: ನೇ‍ಪಾಳಕ್ಕೆ ರಷ್ಯಾ

ಪಿಟಿಐ
Published 10 ಸೆಪ್ಟೆಂಬರ್ 2025, 2:35 IST
Last Updated 10 ಸೆಪ್ಟೆಂಬರ್ 2025, 2:35 IST
   

ಮಾಸ್ಕೊ: ನೇಪಾಳದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ರಷ್ಯಾ ಕಳವಳ ವ್ಯಕ್ತಡಿಸಿದ್ದು, ಶಾಂತಿಯುತ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದೆ.

ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಹೇರಿದ ನಿಷೇಧವನ್ನು ಖಂಡಿಸಿ ಆಕ್ರೋಶ ಭುಗಿಲೆದಿದ್ದು, ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮಂಗಳವಾರ ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದ್ದರು.

'ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಮಿತ್ರ ರಾಷ್ಟ್ರದಲ್ಲಿ ಶಾಂತಿ ನೆಲೆಸುವಂತೆ, ಆ ನಿಟ್ಟಿನಲ್ಲಿ ಶಾಂತಿಯುತವಾಗಿ ಮಾತುಕತೆ ಮೂಲಕ ಬಿಕ್ಕಟ್ಟನ್ನು ಶಮನಗೊಳ್ಳಿಸುವಂತೆ' ರಷ್ಯಾ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಇಂತಹ ಪರಿಸ್ಥಿತಿಯಲ್ಲಿ ನೇಪಾಳಕ್ಕೆ ಪ್ರಯಾಣ ಬೆಳಸದಂತೆ ತನ್ನ ನಾಗರಿಕರಿಗೆ ರಷ್ಯಾ ಸರ್ಕಾರ ನಿರ್ದೇಶನ ನೀಡಿದೆ. ಸದ್ಯ ನೇಪಾಳದಲ್ಲಿ ಸುಮಾರು 200 ರಷ್ಯಾದ ಪ್ರವಾಸಿಗರಿದ್ದಾರೆ ಎಂದು ರಷ್ಯಾದ ಪ್ರವಾಸೋದ್ಯಮ ಒಕ್ಕೂಟದ ಮುಖ್ಯಸ್ಥೆ ನಟಾಲಿಯಾ ಒಸಿಪೋವಾ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ತಾಣಗಳ ಮೇಲಿನ ಸರ್ಕಾರ ಹೇರಿದ್ದ ನಿಷೇಧವನ್ನು ವಿರೋಧಿಸಿ ಸೋಮವಾರ ಕಠ್ಮಂಡು ಮತ್ತು ಇತರ ಕೆಲವು ಸ್ಥಳಗಳಲ್ಲಿ ಯುವಕರು ನಡೆಸಿದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಕನಿಷ್ಠ 19 ಜನರು ಮೃಪಪಟ್ಟಿದ್ದು, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.