ADVERTISEMENT

'ಭಯೋತ್ಪಾದನೆಗೆ ದ್ವಾರವಿದ್ದಂತೆ'; ತಬ್ಲಿಗಿ ಜಮಾತ್‌ ನಿಷೇಧಿಸಿದ ಸೌದಿ ಸರ್ಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2021, 9:03 IST
Last Updated 12 ಡಿಸೆಂಬರ್ 2021, 9:03 IST
ಸೌದಿ ಅರೇಬಿಯಾದ ರಿಯಾಧ್‌ –ಸಂಗ್ರಹ ಚಿತ್ರ
ಸೌದಿ ಅರೇಬಿಯಾದ ರಿಯಾಧ್‌ –ಸಂಗ್ರಹ ಚಿತ್ರ   

ರಿಯಾಧ್‌: ಸೌದಿ ಅರೇಬಿಯಾ ತಬ್ಲಿಗಿ ಜಮಾತ್ ಸಂಘಟನೆಯನ್ನು ನಿಷೇಧಿಸಿದೆ. ತಬ್ಲಿಗಿ ಜಮಾತ್ 'ಸಮಾಜಕ್ಕೆ ಅಪಾಯಕಾರಿ' ಮತ್ತು 'ಭಯೋತ್ಪಾದನೆಗೆ ಒಂದು ದ್ವಾರವಿದ್ದಂತೆ' ಎಂದು ಹೇಳಿದೆ.

ತಬ್ಲಿಗಿ ಜಮಾತ್‌ ಸದಸ್ಯರೊಂದಿಗೆ ಸೇರುವುದರ ವಿರುದ್ಧ ಶುಕ್ರವಾರದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಚ್ಚರಿಕೆ ರವಾನಿಸುವಂತೆ ಮಸೀದಿಗಳಿಗೆ ಸೌದಿ ಅರೇಬಿಯಾದ ಇಸ್ಲಾಮಿಕ್‌ ವ್ಯವಹಾರಗಳ ಸಚಿವಾಲಯವು ಸೂಚನೆ ನೀಡಿದೆ. ಆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ.

'ಮುಂದಿನ ಶುಕ್ರವಾರದ ಸಭೆಯಲ್ಲಿ ತಬ್ಲಿಗಿ ಮತ್ತು ದಾವಾಹ್ ಗುಂಪಿನ ಕುರಿತು ಎಚ್ಚರಿಕೆ ನೀಡುವಂತೆ ಇಸ್ಲಾಮಿಕ್‌ ವ್ಯವಹಾರಗಳ ಖಾತೆ ಸಚಿವ, ಡಾ.ಅಬ್ದುಲ್ಲಾತಿಫ್‌ ಅಲ್‌_ಅಲ್‌ಶೇಖ್‌ ಅವರು ಬೋಧಕರಿಗೆ ಮತ್ತು ಮಸೀದಿಗಳಿಗೆ ಸೂಚನೆ ನೀಡಿದ್ದಾರೆ' ಎಂದು ಸೌದಿ ಅರೇಬಿಯಾದ ಇಸ್ಲಾಮಿಕ್‌ ವ್ಯವಹಾರಗಳ ಸಚಿವಾಲಯ ಟ್ವೀಟಿಸಿದೆ.

ADVERTISEMENT

'ಸಮಾಜಕ್ಕೆ ತಬ್ಲಿಗಿ ಜಮಾತ್‌ನಿಂದ ಆಗುವ ಅಪಾಯ, ದಾರಿ ತಪ್ಪಿಸುವುದು, ಹಾಗೂ ಭಯೋತ್ಪಾದನೆಗೆ ಹೆಬ್ಬಾಗಿಲು ಆಗುವ' ಕುರಿತು ಜನರಿಗೆ ಮಾಹಿತಿ ನೀಡುವಂತೆ ಸೌದಿ ಸರ್ಕಾರವು ಮಸೀದಿಗಳಿಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.