ADVERTISEMENT

ತೈವಾನ್‌: ತರಬೇತಿ ವೇಳೆ ಯುದ್ಧವಿಮಾನ ಕಣ್ಮರೆ, ಪತನದ ಶಂಕೆ

ರಾಯಿಟರ್ಸ್
Published 11 ಜನವರಿ 2022, 10:34 IST
Last Updated 11 ಜನವರಿ 2022, 10:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತೈಪೆ (ರಾಯಿಟರ್ಸ್‌): ದ್ವೀಪ ರಾಷ್ಟ್ರ ತೈವಾನ್‌ನ ವಾಯುಪಡೆ ಮಂಗಳವಾರ ಸಮುದ್ರದಲ್ಲಿ ನಡೆಸಿದ ತರಬೇತಿ ಕಾರ್ಯಾಚರಣೆಯೊಂದರ ವೇಳೆ ಸಂಭವಿಸಿದ ಅಪಘಾತದಲ್ಲಿ ಎಫ್‌–16 ಯುದ್ಧ ವಿಮಾನವೊಂದು ಕಣ್ಮರೆಯಾಗಿದೆ.

ಯುದ್ಧವಿಮಾನವು ಪತನಗೊಂಡಿರುವುದಾಗಿ ಶಂಕಿಸಲಾಗಿದೆ. ವಿಮಾನ ಮತ್ತು ಪೈಲಟ್‌ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದುಸರ್ಕಾರ ಹೇಳಿದೆ.

ತೈವಾನ್‌ ಯುದ್ಧ ವಿಮಾನಗಳಲ್ಲಿ ಎಫ್‌–16ವಿ ಅತ್ಯಾಧುನಿಕ ಮಾದರಿಯದ್ದಾಗಿದೆ.

ADVERTISEMENT

ದಕ್ಷಿಣ ತೈವಾನ್‌ನ ಚಿಯಾಯಿ ವಾಯುನೆಲೆಯಿಂದ ಹಾರಿದ ಈ ವಿಮಾನ ನಂತರ ರೆಡಾರ್‌ ಪರದೆಯಿಂದ ಕಣ್ಮರೆಯಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.