ADVERTISEMENT

24 ಗಂಟೆಗಳಲ್ಲಿ ಭಾರತದ ಸರಕುಗಳ ಮೇಲಿನ ಸುಂಕ ಮತ್ತಷ್ಟು ಏರಿಕೆ: ಟ್ರಂಪ್

ಪಿಟಿಐ
Published 5 ಆಗಸ್ಟ್ 2025, 14:27 IST
Last Updated 5 ಆಗಸ್ಟ್ 2025, 14:27 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ರ ಕೃಪೆ: ರಾಯಿಟರ್ಸ್‌

ನ್ಯೂಯಾರ್ಕ್‌/ ಮಾಸ್ಕೊ: ಭಾರತವು ಅಮೆರಿಕದ ಉತ್ತಮ ವ್ಯಾಪಾರ ಪಾಲುದಾರ ದೇಶವಲ್ಲ, ಮುಂದಿನ 24 ಗಂಟೆಯೊಳಗೆ ಭಾರತದ ಸರಕುಗಳ ಮೇಲಿನ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇವೆ. ಏಕೆಂದರೆ ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಹೇಳಿದ್ದಾರೆ.

ADVERTISEMENT

ಜಗತ್ತಿನ ಇತರ ರಾಷ್ಟ್ರಗಳಿಗಿಂತ ಭಾರತ ಅತಿ ಹೆಚ್ಚು ಸುಂಕ ವಿಧಿಸುತ್ತದೆ, ಹೀಗಾಗಿ ಜನರು ಭಾರತದ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ. ನಾವು ಅವರೊಂದಿಗೆ ಅತಿ ಚಿಕ್ಕ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಅದಕ್ಕೆ ಭಾರತ ವಿಧಿಸುತ್ತಿರುವ ಅತಿಯಾದ ಸುಂಕವೇ ಕಾರಣ’ ಎಂದು ಟ್ರಂಪ್‌ ಸಿಎನ್‌ಬಿಸಿ ಸ್ಕ್ವಾಕ್ ಬಾಕ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತ ಉತ್ತಮ ವ್ಯಾಪಾರ ಪಾಲುದಾರ ದೇಶವಲ್ಲ. ಭಾರತ ನಮ್ಮೊಂದಿಗೆ ಅನೇಕ ವ್ಯಾಪಾರವನ್ನು ನಡೆಸುತ್ತಿದೆ. ಆದರೆ, ನಾವು ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ. ಹೀಗಾಗಿ ನಾವು ಶೇ 25 ರಷ್ಟು ಸುಂಕ ಹೇರಿದ್ದೇವೆ. ಬಹುಶಃ ಮುಂದಿನ 24 ಗಂಟೆಯಲ್ಲಿ ಗಣನೀಯವಾಗಿ ಅದನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ. ಏಕೆಂದರೆ ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ, ಅವರು ಯುದ್ಧ ಯಂತ್ರಕ್ಕೆ ಇಂಧನವನ್ನು ತುಂಬಿಸುತ್ತಿದ್ದಾರೆ. ಅವರು ಅದನ್ನು ಮುಂದುವರಿಸಿದರೆ, ನನಗೆ ಸಂತೋಷವಾಗದು’ ಎಂದು ಹೇಳಿದ್ದಾರೆ. 

ನಿನ್ನೆ ಸುಂಕ ಏರಿಸುವ ಕುರಿತು ಮಾತನಾಡಿದ್ದ ಟ್ರಂಪ್, ‘ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುತ್ತಿರುವ ಭಾರತ, ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದರು. ಅಲ್ಲದೆ ‘ಭಾರತದ ಸರಕುಗಳಿಗೆ ಸುಂಕವನ್ನು ಗಣನೀಯವಾಗಿ ಏರಿಕೆ ಮಾಡಲಾಗುವುದು’ ಎಂದು ಹೇಳಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತ, ‘ಸುಂಕ ಹೇರುವ ಪರಿಣಾಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದು, ದೇಶದ ಹಿತಾಸಕ್ತಿ ಕಾಯಲು ಎಲ್ಲ ರೀತಿಯ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.