ADVERTISEMENT

ಇರಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ: ಪಾಕಿಸ್ತಾನ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 9:51 IST
Last Updated 22 ಜೂನ್ 2025, 9:51 IST
<div class="paragraphs"><p>ಅಮೆರಿಕದ ಬಿ-2 ಬಾಂಬರ್</p></div>

ಅಮೆರಿಕದ ಬಿ-2 ಬಾಂಬರ್

   

–ರಾಯಿಟರ್ಸ್ ಚಿತ್ರ

ಲಾಹೋರ್: ಇರಾನ್‌ನಲ್ಲಿ ಇರುವ ಮೂರು ಪರಮಾಣು ಸಂಶೋಧನಾ ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿರುವ ಅಮೆರಿಕದ ನಡೆಯನ್ನು ಪಾಕಿಸ್ತಾನ ಖಂಡಿಸಿದೆ.

ADVERTISEMENT

ಈ ದಾಳಿ ಕ್ರಮವಾಗಿ ಪ್ರಾದೇಶಿಕ ವಲಯದಲ್ಲಿ ಬಿಕ್ಕಟ್ಟು, ಹಿಂಸೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ನೊಬೆಲ್‌ ಶಾಂತಿ ಪುರಸ್ಕಾರಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೆಸರು ಶಿಫಾರಸು ಮಾಡಲು ಪಾಕ್‌ ಇತ್ತೀಚೆಗೆ ನಿರ್ಧರಿಸಿತ್ತು. ಅದರ ಹಿಂದೆಯೇ ಈಗ ದಾಳಿಗೆ ಸಂಬಂಧಿಸಿ ಅಮೆರಿಕದ ನಡೆ ಖಂಡಿಸಿದೆ. 

ಈ ಕುರಿತ ಹೇಳಿಕೆಯಲ್ಲಿ ಪಾಕ್‌ನ ವಿದೇಶಾಂಗ ಸಚಿವಾಲಯವು, ‘ಅಮೆರಿಕದ ದಾಳಿಯನ್ನು ಖಂಡಿಸುತ್ತೇವೆ. ಇದು, ಪ್ರಾದೇಶಿಕವಾಗಿ ಬಿಕ್ಕಟ್ಟು ಹೆಚ್ಚಿಸಲಿದೆ ಎಂಬುದು ಹೆಚ್ಚಿನ ಕಳವಳ ಮೂಡಿಸಿದೆ’ ಎಂದಿದೆ.

ಈ ದಾಳಿಯು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ವಿಶ್ವಸಂಸ್ಥೆಯ ಸನ್ನದಿನ ಅನುಸಾರ, ‘ಇರಾನ್‌ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕುಗಳನ್ನು ಹೊಂದಿದೆ’ ಎಂದು ಪ್ರತಿಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.