ADVERTISEMENT

ಚೀನಾದ ವುಹಾನ್‌ ಪ್ರಯೋಗಾಲಯವೇ ಕೊರೊನಾ ಮೂಲ: ಡೊನಾಲ್ಡ್ ಟ್ರಂಪ್

ಪಿಟಿಐ
Published 1 ಮೇ 2020, 7:14 IST
Last Updated 1 ಮೇ 2020, 7:14 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಕೊರೊನಾ ವೈರಸ್ (ಕೋವಿಡ್–19) ಚೀನಾದ ವುಹಾನ್‌ ಲ್ಯಾಬ್‌ನಿಂದಲೇ ಹರಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಶ್ವೇತ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಮಾಹಿತಿ ಅರುಹಿದ್ದಾರೆ. ಆ ಕುರಿತು ಏನಾದರೂ ಖಚಿತ ಮಾಹಿತಿ ನಿಮ್ಮ ಬಳಿ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಹೌದೆಂದು ಉತ್ತರಿಸಿದ ಟ್ರಂಪ್, ವಿಸ್ತೃತ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಹೇಳಿದ್ದಾರೆ.

‘ಸದ್ಯ ನಾನಿದರ ಬಗ್ಗೆ ಹೆಚ್ಚು ಮಾಹಿತಿ ನೀಡುವಂತಿಲ್ಲ. ಅದಕ್ಕೆ ನನಗೆ ಅನುಮತಿಯೂ ಇಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.

ADVERTISEMENT

ಆದಾಗ್ಯೂ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೊಣೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಾಗೆ ಹೇಳಲಾರೆ. ಆದರೆ ಖಂಡಿತವಾಗಿಯೂ ಅದನ್ನು ಮೂಲದಲ್ಲಿಯೇ ತಡೆಯಬಹುದಿತ್ತು. ಚೀನಾದಲ್ಲಿಯೇ ಅದನ್ನು ತಡೆದಿದ್ದರೆ ಇಡೀ ವಿಶ್ವಕ್ಕೇ ಹರಡುವುದನ್ನು ತಡೆಯಬಹುದಿತ್ತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.