ADVERTISEMENT

ಅತ್ಯಂತ ಜಾಗರೂಕರಾಗಿರಿ: ಜಗತ್ತಿನಾದ್ಯಂತ ಇರುವ ಅಮೆರಿಕನ್ನರಿಗೆ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2025, 4:25 IST
Last Updated 23 ಜೂನ್ 2025, 4:25 IST
<div class="paragraphs"><p>ಇರಾನ್ ಮೇಲೆ ಅಮೆರಿಕ ದಾಳಿ ಖಂಡಿಸಿ ಪ್ರತಿಭಟನೆ</p></div>

ಇರಾನ್ ಮೇಲೆ ಅಮೆರಿಕ ದಾಳಿ ಖಂಡಿಸಿ ಪ್ರತಿಭಟನೆ

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಇರಾನ್‌ನ ಮೂರು ಪರಮಾಣು ಘಟಕಗಳ ಮೇಲಿನ ದಾಳಿ ಬೆನ್ನಲ್ಲೇ ಜಗತ್ತಿನಾದ್ಯಂತ ಇರುವ ತನ್ನ ಪ್ರಜೆಗಳಿಗೆ ಅಮೆರಿಕ ಅತ್ಯಂತ ಜಾಗರೂಕರಾಗಿರುವಂತೆ ಎಚ್ಚರಿಸಿದೆ.

ADVERTISEMENT

ಅಮೆರಿಕದ ವಿದೇಶಾಂಗ ಇಲಾಖೆ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ವಿದೇಶಗಳಲ್ಲಿ ವಾಸಿಸುವ ಅಥವಾ ಪ್ರಯಾಣಿಸುವ ಪ್ರಜೆಗಳನ್ನು ಭದ್ರತಾ ಅಪಾಯಕ್ಕೆ ಸಿಲುಕಿಸಬಹುದು ಎಂದು ಹೇಳಿದೆ.

'ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಪ್ರಯಾಣಕ್ಕೆ ಅಡ್ಡಿಯನ್ನುಂಟು ಮಾಡಿದೆ. ವಿದೇಶಗಳಲ್ಲಿ ಅಮೆರಿಕ ಹಾಗೂ ನಾಗರಿಕರ ಹಿತಾಸಕ್ತಿಗಳ ವಿರುದ್ಧ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ. ಜಗತ್ತಿನಾದ್ಯಂತದ ಅಮೆರಿಕದ ನಾಗರಿಕರು ಅತ್ಯಂತ ಎಚ್ಚರ ಹಾಗೂ ಜಾಗರೂಕರಾಗಿರುವಂತೆ ವಿದೇಶಾಂಗ ಇಲಾಖೆಯು ಸಲಹೆ ನೀಡುತ್ತದೆ. ಪ್ರಯಾಣವನ್ನು ಯೋಜಿಸುವ ಮುನ್ನ ದಯವಿಟ್ಟು ಸಲಹೆ, ಸೂಚನೆ ಹಾಗೂ ಭದ್ರತಾ ಮಾರ್ಗದರ್ಶನಗಳನ್ನು ಎಚ್ಚರಿಕೆಯಿಂದ ಓದಿ' ಎಂದು ತಿಳಿಸಿದೆ.

ನ್ಯೂಯಾರ್ಕ್ ಸಿಟಿಯಲ್ಲಿ ಭಾರಿ ಪ್ರತಿಭಟನೆ...

ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕದ ಪ್ರಮುಖ ನಗರವಾದ ನ್ಯೂಯಾರ್ಕ್ ಸಿಟಿಯಲ್ಲಿ ಯುದ್ಧದ ವಿರುದ್ಧ ಭಾರಿ ಪ್ರತಿಭಟನೆ ನಡೆದಿವೆ.

ಅಮೆರಿಕದ ನಡೆಯನ್ನು ಖಂಡಿಸಿ ನೂರಾರು ಮಂದಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.

ಇರಾನ್‌ನ ಪರಮಾಣು ಘಟಕಗಳ ಮೇಲಿನ ದಾಳಿ ಬೆನ್ನಲ್ಲೇ ನ್ಯೂಯಾರ್ಕ್ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳಲ್ಲಿ 'ಹೈ ಅಲರ್ಟ್' ಘೋಷಿಸಲಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ.

ಇರಾನ್ ಮೇಲೆ ಅಮೆರಿಕ ದಾಳಿ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.